ಮಥುರಾ ದೇವಸ್ಥಾನದ ಆವರಣದಲ್ಲಿ ನಮಾಝ್ ಮಾಡುತ್ತಿರುವ ಫೋಟೋ ವೈರಲ್| ಇಬ್ಬರ ವಿರುದ್ಧ ಕೇಸ್

mathura temple namaz
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಥುರಾ(12-11-2020): ಮಥುರಾ ಪಟ್ಟಣದ ನಂದಗಾಂವ್ ಪ್ರದೇಶದಲ್ಲಿರುವ ನಂದ ಬಾಬಾ ಮಂದಿರದ ಆವರಣದಲ್ಲಿ ನಮಾಝ್ ಮಾಡಿದ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ ಮತ್ತು ಈ ಕುರಿತ ಫೋಟೋ ವೈರಲ್ ಆಗಿದೆ.

ಈ ಕುರಿತು ಫೈಜಲ್​ ಖಾನ್ ಮತ್ತು ಮೊಹಮ್ಮದ್ ಚಾಂದ್ ಎನ್ನುವ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ನಂದಗಾಂವ್ ಪ್ರದೇಶದಲ್ಲಿರುವ ನಂದ ಬಾಬಾ ಮಂದಿರಕ್ಕೆ ಭೇಟಿ ನೀಡಿದ ಇವರು  ನಮಾಜ್‌ ಮಾಡಲು ಶುರು ಮಾಡಿದ್ದಾರೆ. ಈ ವೇಳೆ ನಮಾಝ್ ಮಾಡದಂತೆ ದೇವಸ್ಥಾನದ ಮುಖ್ಯ ಅರ್ಚಕರು ಎಚ್ಚರಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಕಲೆ ಹಾಕಿದ ಪೊಲೀಸರು, ಖಾನ್, ಚಾಂದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಅವರಿಗೆ ದೇವಸ್ಥಾನದೊಳಗೆ ಪ್ರವೇಶಿಸುವುದಕ್ಕೆ ಸಹಾಯ ಮಾಡಿದ ಮುಕೇಶ್ ಗೋಸ್ವಾಮಿ ಮತ್ತು ಶಿವಹರಿ ಗೋಸ್ವಾಮಿ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ವೇಳೆ, ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಭದ್ರತೆ ಒದಗಿಸಲಾಗಿದೆ. ಅಹಿತಕರ ಘಟನೆಗಳಾದಂತೆ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ತೆಗೆದುಕೊಂಡಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು