ಮಥುರ ಆಶ್ರಮದಲ್ಲಿ ಇಬ್ಬರು ಸಾಧುಗಳು ಸಾವು, ಓರ್ವರು ಗಂಭೀರ| ವ್ಯವಸ್ಥಿತ ಕೊಲೆ ಶಂಕೆ

CRIME NEWS
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಥುರಾ (22-11-2020): ಮಥುರಾದ ಆಶ್ರಮದಲ್ಲಿ ವಿಷ ಆಹಾರ ನೀಡಿರುವ ಶಂಕೆ ವ್ಯಕ್ತವಾಗಿದ್ದು, ಚಹಾ ಕುಡಿದ ಇಬ್ಬರು ಸಾಧುಗಳು ನಿಗೂಢವಾಗಿ ಮೃತಪಟ್ಟಿದ್ದಾರೆ, ಇನ್ನೋರ್ವರು ಗಂಭೀರವಾಗಿದ್ದಾರೆ.

ಗುಲಾಬ್ ಸಿಂಗ್(60) , ಶ್ಯಾಮ್ ಸುಂದರ್(61) ಮೃತ  ಸಾಧುಗಳು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರಾಮ್ ಬಾಬು ಎಂಬವರು ಗಂಭೀರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಮಥುರಾ ಎಸ್‌ಎಸ್‌ಪಿ ಗೌರವ್ ಈ ಕುರಿತು ಮಾಹಿತಿ ನೀಡಿದ್ದು, ಚಹಾ ಕುಡಿದ ಇಬ್ಬರು ಸಾಧುಗಳು ಸಾವನ್ನಪ್ಪಿದ್ದಾರೆ. ಆಶ್ರಮದಲ್ಲಿ ವಿಧಿವಿಜ್ಞಾನ ತಂಡವು ಘಟನೆಗೆ ಕಾರಣ ಬಗ್ಗೆ ಶೋಧ ನಡೆಸಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಮೃತ ಸಾಧುಗಳ ಕುಟುಂಬಸ್ಥರು ಆಹಾರಕ್ಕೆ ವಿಷವನ್ನು ಹಾಕಿ ಸಾಧುಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು