ಮಾತೃ ಮಂಡಳಿ ಮನುಕುಲವನ್ನು ಬಂಧಿಸುವ ವಾತ್ಸಲ್ಯದ ಸರಪಳಿ

Share on facebook
Share on twitter
Share on linkedin
Share on whatsapp
Share on telegram
Share on email
Share on print


ನಾ ದಿವಾಕರ, ಹಿರಿಯ ಲೇಖಕರು

ಮಾತೆ ಅಥವಾ ಮಾತೃ ಈ ಪದದ ಮೂಲ ಧಾತು ಪ್ರೀತಿ ವಾತ್ಸಲ್ಯ ಮತ್ತು ಸ್ನೇಹ. ಮಾತೃ ಮಂಡಳಿ ಎಂದರೆ ಸಮಾಜದಲ್ಲಿ ಮನುಜ ಸಂವೇದನೆಯನ್ನು ಗಟ್ಟಿಗೊಳಿಸುವ ಸೇತುವೆ ಆಗಬೇಕು. ಮಾತೃ ಮಂಡಳಿ ಮಾನವ ಸಮಾಜದ ಎಲ್ಲ ತಾರತಮ್ಯ, ಅಸಮಾನತೆಗಳನ್ನೂ ತೊಡೆದುಹಾಕುವ ವೇದಿಕೆಯಾಗಬೇಕು. ಮಾತೃ ಮಂಡಳಿ ಮನುಕುಲವನ್ನು ಬಂಧಿಸುವ ವಾತ್ಸಲ್ಯದ ಸರಪಳಿ ಆಗಬೇಕು. ಮಾತೃ ಮಂಡಳಿ ಭಾರತೀಯ ಸಮಾಜದ ಅನಿಷ್ಟ ಜಾತಿ ದೌರ್ಜನ್ಯವನ್ನು ಹೋಗಲಾಡಿಸುವ ಪ್ರೀತಿಯ ಸೆಲೆ ಆಗಬೇಕು. ಮಾತೃ ಮಂಡಳಿ, ಶತಮಾನಗಳ ಅಸಮಾನತೆಯನ್ನು ಅಸ್ಪೃಶ್ಯತೆಯ ಪಿಡುಗನ್ನು ಕೊನೆಗೊಳಿಸುವ ಮನುಜ ಪ್ರೀತಿಯ ಆಶ್ರಯತಾಣ ಆಗಬೇಕು. ಮಾತೃ ಮಂಡಳಿ, ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಾ ನಿತ್ಯ ಅತ್ಯಾಚಾರಕ್ಕೆ ಗುರಿಯಾಗುತ್ತಿರುವ ಸ್ತ್ರೀ ಸಂಕುಲದ ರಕ್ಷಣಾ ಕೋಟೆ ಆಗಬೇಕು. ಮಾತೃ ಮಂಡಳಿ , ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತುಳಿತಕ್ಕೊಳಗಾಗುತ್ತಿರುವ ಮಹಿಳಾ ಸಂಕುಲದ ಸಾಂತ್ವನದ ನೆಲೆಯಾಗಬೇಕು. ಆಗಲೇ ಮಾತೆ ಎಂಬ ಪದ ಅರ್ಥಪೂರ್ಣವಾಗುತ್ತದೆ.

ಇಂತಹ ಒಂದು ಮಾನವೀಯ ನೆಲೆಯ ಸಂವೇದನಾಶೀಲ, ಉದಾತ್ತ ಮೌಲ್ಯಗಳ “ಮಾತೃಮಂಡಳಿ ” ಸ್ಥಾಪಿಸುವ ಅರ್ಹತೆಯೇ ಇಲ್ಲದ ಪೇಜಾವರರು ಬ್ರಾಹ್ಮಣ ಹೆಣ್ಣುಮಕ್ಕಳನ್ನು ಅಂತರ್ಜಾತಿ ವಿವಾಹದಿಂದ ‘ ರಕ್ಷಿಸಲು ‘ ಮಾತೃ ಮಂಡಳಿ ರಚಿಸಲು ಕರೆ ನೀಡಿರುವುದು ಸ್ತ್ರೀ ಸಂಕುಲಕ್ಕೆ ಮಾಡುವ ಅಪಚಾರ. ಪಿತೃಪ್ರಧಾನ ವ್ಯವಸ್ಥೆಯ ಸಂರಕ್ಷಕರಾಗಿ, ಬ್ರಾಹ್ಮಣ ಪುರುಷರ ಸ್ವಾತಂತ್ರ್ತಕ್ಕೆ ಅಡ್ಡಿಯಾಗಲು ಇಚ್ಚಿಸದ ಕರ್ಮಠರು ಮಹಿಳೆಯರನ್ನು ಮತ್ತಷ್ಟು ದಿಗ್ಬಂಧನಕ್ಕೊಳಪಡಿಸಲು ಮುಂದಾಗಿರುವುದು ಅಚ್ಚರಿಯೇನಲ್ಲ.

ಬ್ರಾಹ್ಮಣ ಹೆಣ್ಣು ಮಕ್ಕಳು ಸುಸಂಸ್ಕೃತ ಸಮಾಜವನ್ನು ತೊರೆದು ಬೇರೆ ಸಮಾಜದ ಯುವಕರನ್ನು ವರಿಸುವುದನ್ನು ತಡೆಗಟ್ಟುವುದು ಪೇಜಾವರರ ಉದ್ದೇಶ. ತಮ್ಮ ಕಲ್ಪಿತ ಹಿಂದೂ ರಾಷ್ಟ್ರದಲ್ಲಿ ಎರಡು ಸಮಾಜಗಳಿರುವುದನ್ನು ತಾವೇ ಒಪ್ಪಿಕೊಂಡಂತಿದೆ. ಹಾಗೆಯೇ ಗೋಲ್ವಾಲ್ಕರ್ ಕನಸಿನ ಹಿಂದೂ ರಾಷ್ಟ್ರದ ಸಾಂಸ್ಕೃತಿಕ ಶ್ರೇಷ್ಠತೆ, ಅಂದರೆ ಬ್ರಾಹ್ಮಣ್ಯದ ಪಾರಮ್ಯವನ್ನು ಸಂರಕ್ಷಿಸುವ ಯೋಜನೆಯೂ ಪೇಜಾವರರ ಮಾತುಗಳಲ್ಲಿ ಅಡಗಿದೆ. ಇದು ಕೇವಲ ಪೇಜಾವರರ ಧ್ವನಿಯಷ್ಟೇ ಅಲ್ಲ, ಇದರ ಮೂಲ ನಾಗಪುರದಲ್ಲಿದೆ. ಅಧಿಕಾರ ರಾಜಕಾರಣದ ಮೋಹಕ್ಕೆ ಬಲಿಯಾಗಿ ಇಂತಹ ಕರ್ಮಠರ ಮಾತುಗಳನ್ನೂ ವಿರೋಧಿಸಲಾಗದೆ ಇರುವವರು ಇನ್ನಾದರೂ ನಿದ್ದೆಯಿಂದ ಏಳಬೇಕು.

ಮಾತೆಯರಲ್ಲೂ ತಾರತಮ್ಯ ಮಾಡಲು ತಮ್ಮದೇ ಆದ ಸಾಂಪ್ರದಾಯಿಕ ಅಸ್ತ್ರಗಳನ್ನು, ಮಾರ್ಗಗಳನ್ನು ಬಳಸುವ ಪೇಜಾವರರಂತಹ ಕರ್ಮಠರಿಗೆ ” ಮಾತೃ ಮಂಡಳಿ ” ರಚಿಸುವ ನೈತಿಕ ಅರ್ಹತೆ ಇದೆಯೇ ?

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು