ಮಸ್ಕಿ ಬೈ ಎಲೆಕ್ಷನ್ : ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪರ ಪ್ರಚಾರಕ್ಕೆ ಸಿಂಗರ್ ‘ಮಂಗ್ಲಿ’

Share on facebook
Share on twitter
Share on linkedin
Share on whatsapp
Share on telegram
Share on email
Share on print

ರಾಯಚೂರು(ಮಸ್ಕಿ): ‘ಕಣ್ಣೇ ಅದರಿಂದಿ..ಬೈಟೇ ಚದುರಿಂದಿ… ಹಾಡಿನಿಂದ ಹೆಚ್ಚು ಜನಪ್ರಿಯತೆ ಪಡೆದಿರುವ ತೆಲುಗು ಸಿನಿಮಾದ ಹಿನ್ನೆಲೆ ಗಾಯಕಿ ಮಂಗ್ಲಿ ಅವರು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಚುನಾವಣಾ ಪ್ರಚಾರ ಮಾಡುವುದಕ್ಕೆ ಏಪ್ರಿಲ್‌ 13 ರಂದು ಮಸ್ಕಿಗೆ ಆಗಮಿಸಲಿದ್ದಾರೆ.

ಕನ್ನಡದ ‘ರಾಬರ್ಟ್‌’ ಚಲನಚಿತ್ರದಲ್ಲಿ ‘ಕಣ್ಣು ಹೊಡೆಯಾಕ್‌….ನಿನ್ನಟಕ್ಕೆಲ್ಲಿ ಗಮತ್ತಗುಂದಿ…’ ಎಂಬ ಹಾಡನ್ನು ತೆಲುಗು ಭಾಷೆಯಲ್ಲಿ ಮಂಗ್ಲಿ ಹಾಡಿದ್ದಾರೆ.
ಆ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿದೆ. ಈ ಹಾಡಿನ ಮೂಲಕ ಮಂಗ್ಲಿ ಅವರಿಗೆ ಬೇಡಿಕೆ ಕೂಡ ಹೆಚ್ಚಿದೆ.

ಸಖತ್ ಫೇಮಸ್ ಆಗಿರುವ ಮಂಗ್ಲಿ ಅವರ ಮೂಲಕ ಮತದಾರರನ್ನು ಸೆಳೆಯುವ ತಂತ್ರಗಾರಿಕೆ ಬಿಜೆಪಿಯದ್ದು, ಮಸ್ಕಿ ವಿಧಾನಸಭಾ ಉಪ ಚುನಾವಣೆಗೆ ಇದೇ 17ರಂದು ಮತದಾನ ನಡೆಯಲಿದೆ, ಈ ಹಿನ್ನೆಲೆಯಲ್ಲಿ ಮತದಾರರಿಗೆ ಅದರಲ್ಲೂ ಯುವ ಸಮೂಹವನ್ನು ಸೆಳೆಯುವ ಕೊನೆ ಕಸರತ್ತು ಇದಾಗಿದೆ ಎಂದು ತಿಳಿದು ಬಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು