ದೀರ್ಘಾವಧಿ ಮಾಸ್ಕ್ ಧರಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಪರಿಣಾಮ ಬೀರಲಿದೆಯಾ? ತಜ್ಞರು ಹೇಳುವುದೇನು?

mask
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(04-10-2020):ದೀರ್ಘಾವಧಿ ಮಾಸ್ಕ್ ಧರಿಸುವುದರಿಂದ ವ್ಯಕ್ತಿಗಳಲ್ಲಿ ಆಮ್ಲಜನಕ ಕೊರತೆಯುಂಟಾಗಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂಬ ಬಗ್ಗೆ ಸುದ್ದಿಗಳು ಪ್ರಚಾರವಾದ ಬೆನ್ನಲ್ಲೇ ಅಮೆರಿಕದ ಥೊರಾಸಿಕ್ ಸೊಸೈಟಿಯ ತಜ್ಞರಾದ ಮೈಕಲ್ ಕ್ಯಾಂಪೋಸ್ ಈ ಅಂಶಗಳನ್ನು ಅಲ್ಲಗಳೆದಿದ್ದು, ಮಾಸ್ಕ್ ಧರಿಸುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಅಪಾಯಗಳು ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.

ಜನ್ನಲ್ಸ್ ಆಫ್ ದ ಅಮೆರಿಕನ್ ಥೊರಾಸಿಕ್ ಸೊಸೈಟಿ ಅಧ್ಯಯನ ನಡೆಸಿದ್ದು, ವರದಿ ಪ್ರಕಾರ, ಉಸಿರಾಟಕ್ಕೆ ಅಡ್ಡಿಪಡಿಸುವ ಸಿಒಪಿಡಿ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಹಾಗೂ ಆರೋಗ್ಯಯುತವಾಗಿರುವ ವ್ಯಕ್ತಿಗಳಿಗೂ ದೀರ್ಘ ಕಾಲ ಮಾಸ್ಕ್ ಧರಿಸುವುದರಿಂದ ಆಮ್ಲಜನಕ ಪೂರೈಕೆ ಕೊರತೆ ಉಂಟಾಗಿ ಹೆಚ್ಚು ಸಿಒ2 ಸೇವನೆಯಾಗಲಿದೆ ಇದರಿಂದಾಗಿ ಉಸಿರಾಟಕ್ಕೆ ಅಡ್ಡಿಯಾಗುವ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗಲಿದೆ ಎಂದು ಸುದ್ದಿಯನ್ನು ಹಬ್ಬಿಸಲಾಗಿತ್ತು.

ಆದರೆ ಮಾಸ್ಕ್ ಧರಿಸಿದಾಗ ಗಾಳಿಯ ಸುಗಮ ಸಂಚಾರಕ್ಕೆ ಸ್ವಲ್ಪ ಅಡೆತಡೆ ಉಂಟಾಗಬಹುದು ಈ ವೇಳೆ ಕಿರಿಕಿರಿ ಆಗುವುದು ಸಹಜ ಆದರೆ ಮಾಸ್ಕ್ ಧರಿಸುವುದರಿಂದ ಉಸಿರಾಟದ ತೊಂದರೆ, ಸಿಒಪಿಡಿ ಸಮಸ್ಯೆ ಉಲ್ಬಣವಾಗುವುದಿಲ್ಲ, ಮಾಸ್ಕ್ ಧರಿಸುವುದರಿಂದ ಉಂಟಾಗುವ ಲಾಭಗಳನ್ನು ಜನತೆ ನಿರ್ಲಕ್ಷ್ಯಿಸಬಾರದು ಎಂದು ತಜ್ಞರು ಹೇಳಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು