ಮಾಸ್ಕ್ ಇಲ್ಲದೇ ಸುತ್ತಾಡಿದ ರಾಷ್ಟದ ಅಧ್ಯಕ್ಷ | ಎರಡೂವರೆ ಲಕ್ಷ ರೂಪಾಯಿಗಳ ದಂಡ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಸಾಂಟಿಯಾಂಗೋ(19-12-2020): ದೇಶದಲ್ಲಿರುವ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದ ರಾಷ್ಟ್ರದ ಅಧ್ಯಕ್ಷನಿಗೇ ದಂಡ ಹಾಕಲಾಗಿದೆ. ಮಾಸ್ಕ್ ಹಾಕದ ಕಾರಣಕ್ಕೆ ಅಧ್ಯಕ್ಷನಿಗೆ ಬಿದ್ದ ದಂಡದ ಮೊತ್ತ ಸುಮಾರು ಎರಡೂವರೆ ಲಕ್ಷದಷ್ಟು.

ಚಿಲಿ ದೇಶದ ಅಧ್ಯಕ್ಷರಾದ ಸೆಬಾಸ್ಟಿಯನ್ ಪಿನೇರಾ ಬೀಚಿನಲ್ಲಿ ಸುತ್ತಾಡುತ್ತಿದ್ದರು. ಇವರನ್ನು ಗುರುತಿಸಿದ ಯುವತಿಯೋರ್ವಳು ಅಧ್ಯಕ್ಷರ ಜೊತೆಗೆ ಸೆಲ್ಫಿ ತೆಗೆದಿದ್ದಳು. ಈ ಸಮಯದಲ್ಲಿ ಮಾಸ್ಕ್ ಧರಿಸಿರಲಿಲ್ಲ.

ಮಾಸ್ಕ್ ಧರಿಸದ ಸೆಲ್ಫಿಯು ಸೋಷಿಯಲ್ ಮೀಡಿಯಾದಲ್ಲಿ ವೈರಲಾಯಿತಲ್ಲದೇ, ದೇಶದಲ್ಲಿ ವಿವಾದದ ಕಿಡಿ ಹೊತ್ತಿಕೊಂಡಿತು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರಿಗೇ ದಂಡ ಹಾಕಲಾಗಿದೆ. ಮತ್ತು ಕೊನೆಗೆ ಅವರು ಸಾರ್ವಜನಿಕವಾಗಿ ಪ್ರಜೆಗಳ ಕ್ಷಮೆಕೇಳುವ ಸನ್ನಿವೇಶವೂ ಉಂಟಾಯಿತು.

ಬಿದ್ದ ದಂಡದ ಮೊತ್ತ 3500 ಡಾಲರುಗಳಾಗಿದ್ದು, ಸರಿ ಸುಮಾರು ಎರಡೂವರೆ ಲಕ್ಷ ಭಾರತೀಯ ರೂಪಾಯಿಗಳಿಗೆ ಸಮವಾಗಿದೆ.

ಕಟ್ಟುನಿಟ್ಟಿನ ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿರುವ ಚಿಲಿದೇಶದಲ್ಲಿ 581,135 ಕೊರೋನಾ ಪ್ರಕರಣಗಳು ವರದಿಯಾಗಿದ್ದು, 16,051 ಮಂದಿ ಸಾವಿಗೀಡಾಗಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು