ಕೋವಿಡ್ ಸಮಯದಲ್ಲಿ ಜನಪ್ರಿಯರಾದ ಡಾ. ರಾಜು ಕೃಷ್ಣಮೂರ್ತಿಗೆ ನೋಟೀಸ್ | ರೋಗಿಗಳಿಗೆ ಧೈರ್ಯ ತುಂಬಲು ಮಾಸ್ಕ್ ಹಾಕದೇ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಕೋವಿಡ್ ಸಮಯದಲ್ಲಿ ಜನಪ್ರಿಯರಾಗಿ ಬದಲಾದ ಬೆಂಗಳೂರಿನ ವೈದ್ಯ ಡಾ. ರಾಜು ಕೃಷ್ಣಮೂರ್ತಿ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿ ನೋಟೀಸ್ ಜಾರಿ ಮಾಡಿದ್ದಾರೆ.

ಇವರು ತನ್ನ ಕ್ಲಿನಿಕಿನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ಮಾಸ್ಕ್ ಧರಿಸುತ್ತಿರಲಿಲ್ಲ. ಅದೇ ರೀತಿ ಸೆನಿಟೈಝರ್ ಬಳಕೆ , ದೈಹಿಕ ಅಂತರ ಕಾಯ್ದುಕೊಳ್ಳುವಿಕೆ ಮುಂತಾದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿರಲಿಲ್ಲ. ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಸಮರ್ಥನೆಯನ್ನೂ ಮಾಡಿದ್ದರು. ಹಿನ್ನೆಲೆಯಲ್ಲಿ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.

ಬೆಂಗಳೂರಿನ ಮೂಡ್ಲು ಪಾಳ್ಯ ಸರ್ಕಲ್ ಹತ್ತಿರಸಾಗರ್ಎಂಬ ಹೆಸರಿನ ಕ್ಲಿನಿಕನ್ನು ಡಾ. ರಾಜು ಮತ್ತು ಪತ್ನಿ ಡಾ. ನಿವೇದಿತಾ ಎಂಬವರು ಜೊತೆಗೂಡಿ ನಡೆಸುತ್ತಿದ್ದರು. ಇಲ್ಲಿನ ಇತರ ಸಿಬ್ಬಂದಿಗಳೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಿರಲಿಲ್ಲವೆಂದು ವರದಿಯಾಗಿದೆ.

ಕೋವಿಡ್ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ವೈದ್ಯಕೀಯ ಸಲಹೆ ಸೂಚನೆಗಳನ್ನು ನೀಡುತ್ತಾ ಮುನ್ನೆಲೆಗೆ ಬಂದ ಡಾ ರಾಜು ಕೃಷ್ಣಮೂರ್ತಿ, ಅಲ್ಪಾವಧಿಯಲ್ಲೇ ಸಾಮಾನ್ಯ ಜನರ ನಂಬಿಕೆಗೆ ಪಾತ್ರವಾಗಿದ್ದರು. ಸರಕಾರವು ಲಾಕ್ಡೌನ್ ಹೇರುವ ಕುರಿತು ಟೀಕಿಸಿದ್ದ ಇವರು, ಸಮಯದಲ್ಲಿ ಬಡ ಜನರಿಗೆ, ದಿನಗೂಲಿ ನೌಕರರ ಆಗುತ್ತಿರುವ ತೊಂದರೆಗಳ ಬಗ್ಗೆ ಧ್ವನಿಯೆತ್ತಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಭಿನ್ನಧ್ವನಿಯಾಗಿ ಗುರುತಿಸಿಕೊಂಡಿದ್ದರು.

ಕರ್ನಾಟಕ ಖಾಸಗೀ ವೈದ್ಯಕೀಯ ಸಂಸ್ಥೆ ಕಾಯ್ದೆ ಉಲ್ಲಂಘನೆಯ ಆರೋಪದಲ್ಲಿಯೂ ಇವರ ವಿರುದ್ಧ ಕ್ರಮಕೈ ಗೊಂಡು, ಮೇ 18 ರಂದು(ಇಂದು) ಡಾ. ರಾಜು ಅವರ ಕ್ಲಿನಿಕ್ ಬಂದ್ ಮಾಡಿಸುವ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಸೂಚನೆ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು