ಈ ರೆಸ್ಟೋರೆಂಟಲ್ಲಿ ಮಾಸ್ಕ್ ತೆಗೆಯದೆಯೇ ಊಟ ಮಾಡಬಹುದು!

mask
Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೋಲ್ಕತ್ತಾ(18/10/2020): ಕೊರೋನಾ ಹಾವಳಿ ಶುರುವಾದಂದಿನಿಂದ ಮಾಸ್ಕ್ ಎಲ್ಲರ ಬದುಕಿನ ಭಾಗವಾಗಿ ಬಿಟ್ಟಿದೆ. ಆದರೆ, ಕೆಲವೊಂದು ಸಂದರ್ಭದಲ್ಲಿ ಮಾಸ್ಕ್ ತೆಗೆಯುವುದು ಅನಿವಾರ್ಯವಾಗಿದೆ. ಉದಾಹರಣೆಗೆ ಊಟ ಮಾಡುವಾಗ.

ಆದರೆ, ಪಶ್ಚಿಮ ಬಂಗಾಳದ ಕೋಲ್ಕತ್ತಾದ ರೆಸ್ಟೊರೆಂಟ್‌ ಒಂದರ ಮಾಲಕರು ಇದಕ್ಕೆ ವಿಶಿಷ್ಟ ಉಪಾಯ ಕಂಡುಕೊಂಡಿದ್ದಾರೆ. ಮಾಸ್ಕ್‌ ತೆಗೆಯದೆಯೇ ಆಹಾರ ಸೇವಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ!

gip mask

ಮಾಲಕರು ಮಾಡಿದ್ದಿಷ್ಟೇ.  ಜಿಪ್‌ ಇರುವ ಮಾಸ್ಕ್‌ಗಳನ್ನು  ಗ್ರಾಹಕರಿಗೆ ನೀಡಿದ್ದು. ಗ್ರಾಹಕರು ಆಹಾರ ತಿನ್ನುವಾಗ, ಜ್ಯೂಸ್‌, ನೀರು ಕುಡಿಯುವಾಗ ಮಾಸ್ಕ್‌ ಪೂರ್ಣ ತೆಗೆಯಬೇಕಿಲ್ಲ. ಮಾಸ್ಕ್ ಮಧ್ಯದಲ್ಲಿ ಜಿಪ್‌ ಅಳವಡಿಸಿರುವುದರಿಂದ, ಜಿಪ್‌ ತೆರೆದು ಆಹಾರ, ಪಾನೀಯ ಸೇವಿಸಬಹುದಾಗಿದೆ.
ಇದಕ್ಕಾಗಿ ಅವರು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿಲ್ಲ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು