ದಂಡ ಕಟ್ಟಲು ಹಣವಿಲ್ಲವೆಂದು ಕಣ್ಣೀರಿಟ್ಟ ಮಾಸ್ಕ್ ಹಾಕದ ಯುವಕ! ವಿಡಿಯೋ ವೈರಲ್

mask
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(06-10-2020): ಕೋವಿಡ್ ಹರಡುವುದನ್ನು ತಡೆಯಲು ಮತ್ತು ಸುರಕ್ಷತೆಯನ್ನು ಕಾಪಾಡಲು ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಬೇಕೆಂದು ಸರಕಾರ ಸೂಚನೆಯನ್ನು ನೀಡಿತ್ತು. ನಿಯಮವನ್ನು ಪಾಲಿಸದಿದ್ದರೆ 100 ಇದ್ದ ದಂಡವನ್ನು 1000ರೂ.ಗೆ ಹೆಚ್ಚಿಸಿ ಸರಕಾರ ನೂತನ ಆದೇಶವನ್ನು ಹೊರಡಿಸಿತ್ತು. ಈ ದುಬಾರಿ ದಂಡವನ್ನು ಸರಕಾರ ಸಮರ್ಥಿಸುತ್ತಿದ್ದರೂ, ಜನಸಾಮಾನ್ಯರು ಮಾತ್ರ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇಂತದ್ದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ.

ಮಾಸ್ಕ್ ಧರಿಸದೆ ಇರುವುದಕ್ಕೆ ದಂಡ ಕಟ್ಟಲು ಹಣ ಇಲ್ಲ ಎಂದು ಯುವಕನೊಬ್ಬ ಕಣ್ಣೀರು ಸುರಿಸಿರುವ ಘಟನೆ ನಗರದ ಹಲಸೂರು ಕೆರೆ ವ್ಯಾಪ್ತಿಯಲ್ಲಿ ನಡೆದಿದೆ.

ವಾಕಿಂಗ್ ಗೆ ಬಂದ ಯುವಕ ಮಾಸ್ಕ್ ಧರಿಸಿರಲಿಲ್ಲ ಮತ್ತು ಮಾರ್ಷಲ್ ಗಳಿಗೆ ಸಿಕ್ಕಿಬಿದ್ದಿದ್ದಾನೆ. ಯುವಕನಿಗೆ ಮಾರ್ಷಲ್ ಗಳು ಒಂದು ಸಾವಿರ ರೂ.ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಈ ವೇಳೆ ಯುವಕ ನನ್ನಲ್ಲಿ ಹಣ ಇಲ್ಲ ಎಂದು ಜೋರಾಗಿ ಕಣ್ಣೀರು ಹಾಕಿದ್ದಾನೆ. ಆದ್ರೆ ಮಾರ್ಷಲ್ ಗಳು ಮಾತ್ರ ಆತನಿಂದ ದಂಡವನ್ನು ವಸೂಲಿ ಮಾಡಿದ್ದಾರೆ.

 

 

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು