ಮದೀನಾ(18-10-2020): ಮದೀನಾದ ಮಸ್ಜಿದುನ್ನಬವಿಯಲ್ಲಿನ ರೌಳಾ ಝಿಯಾರತ್ ಇಂದು ಪುನಾರಾರಂಭವಾಯಿತು. ಪ್ರತಿದಿನ 11,800 ಜನರಿಗೆ ಈ ಅನುಮತಿ ಸಿಗಲಿದೆಯೆಂದು ಎಂದು ಮಸ್ಜಿದುನ್ನಬವಿ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಝಿಯಾರತ್, ಮಸ್ಚಿದುನ್ನಬವಿಯಲ್ಲಿನ ನಮಾಜ್ ಇತ್ಯಾದಿಗಳಿಗೆ “ಇಅ್ತಮರ್ನಾ” ಮೊಬೈಲ್ ಅಪ್ಲಿಕೇಶನ್ ಮೂಲಕ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
ಸಂದರ್ಶಕರಿಗೆ ಮೂರು ಪ್ರವೇಶ ದ್ವಾರಗಳನ್ನು ಸಿದ್ಧಗೊಳಿಸಲಾಗಿದೆ. ಪುರುಷರಿಗೆ ಝಿಯಾರತಿಗಾಗಿ ಅಲ್ ಸಲಾಂ ದ್ವಾರ (ಕ್ರಮ ಸಂಖ್ಯೆ- 1), ರೌಳಾಗೆ ಹೋಗಲು ಬಿಲಾಲ್ ದ್ವಾರ(ಕ್ರಮ ಸಂಖ್ಯೆ-38) ಮಹಿಳೆಯರಿಗೆ ಝಿಯಾರತಿಗೆ ಹೋಗಲು ಉಸ್ಮಾನ್ ದ್ವಾರ (ಕ್ರಮ ಸಂಖ್ಯೆ-24).
ಸುಬುಹಿ, ಲುಹುರ್, ಅಸರ್, ಮಗ್ರಿಬ್ ಬಳಿಕ ಪುರುಷರಿಗೆ ರೌಳಾಗೆ ಹೋಗುವ ಅವಕಾಶ ನೀಡಲಾಗಿದೆ. ಸೂರ್ಯೋದಯದಿಂದ ಲುಹುರ್ ವರೆಗಿನ ಸಮಯದಲ್ಲಿ ಸ್ತ್ರೀಯರು ರೌಳಾಗೆ ಹೋಗಬಹುದು. ಇಶಾ ನಮಾಜಿನ ಬಳಿಕ ಮಸ್ಜಿದುನ್ನಬವಿ ಮುಚ್ಚಿ, ಸುಬುಹಿ ನಮಾಜಿಗೆ ಒಂದು ಗಂಟೆ ಮೊದಲು ತೆರೆಯಲಾಗುತ್ತದೆ.