ಮಹಿಳೆಯರ ವಿವಾಹ ವಯಸ್ಸು ಏರಿಕೆ ಕುರಿತ ಮಸೂದೆ ಪರಿಶೀಲಿಸಲಿರುವ ಸಮಿತಿಯಲ್ಲಿ ಕೇವಲ ಒಬ್ಬರು ಮಹಿಳಾ ಸದಸ್ಯೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಹಿಳೆಯರ ವಿವಾಹ ವಯಸ್ಸನ್ನು 18 ರಿಂದ 21ಕ್ಕೆ ಏರಿಸುವ ಬಾಲ್ಯ ವಿವಾಹ ತಡೆ (ತಿದ್ದುಪಡಿ) ಮಸೂದೆಯನ್ನು ಪರಾಮರ್ಶಿಸಲಿರುವ ಸಂಸದೀಯ ಸಮಿತಿಯಲ್ಲಿ ಇರುವ ಏಕೈಕ ಮಹಿಳಾ ಸದಸ್ಯೆ ತೃಣಮೂಲ ಸಂಸದೆ ಸುಷ್ಮಿತಾ ದೇವ್ ಅವರಾಗಿದ್ದಾರೆ ಎಂದು ವರದಿಯಾಗಿದೆ.

ಈ ಮಸೂದೆಯನ್ನು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಂಡಿಸಿದ್ದರು. ನಂತರ ಅದನ್ನು ಪರಿಶೀಲನೆಗಾಗಿ 31 ಸದಸ್ಯರ ಸಮಿತಿಗೆ ಸಲ್ಲಿಸಲಾಗಿತ್ತು.

ಹಿರಿಯ ಬಿಜೆಪಿ ನಾಯಕ ವಿನಯ್ ಸಹಸ್ರಬುದ್ಧೆ ಅವರ ನೇತೃತ್ವದ ಈ ಸಮಿತಿಯಲ್ಲಿ ಸುಷ್ಮಿತಾ ದೇವ್ ಅವರು ಏಕೈಕ ಮಹಿಳಾ ಸದಸ್ಯೆಯಾಗಿದ್ದಾರೆ. ಇನ್ನಷ್ಟು ಮಹಿಳಾ ಸದಸ್ಯೆಯರನ್ನು ಈ ಸಮಿತಿಗೆ ಸೇರಿಸುವ ಅಧಿಕಾರ ಅದರ ಅಧ್ಯಕ್ಷರಿಗಿದೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಹೇಳುತ್ತಾರೆ.

ಈ ಮಸೂದೆಯು ಭಾರತೀಯ ಕ್ರೈಸ್ತ ವಿವಾಹ ಕಾಯಿದೆ, ಪಾರ್ಸಿ ವಿವಾಹ ಮತ್ತು ವಿಚ್ಚೇದನ ಕಾಯಿದೆ, ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಕಾಯಿದೆ, ವಿಶೇಷ ವಿವಾಹ ಕಾಯಿದೆ, ಹಿಂದು ವಿವಾಹ ಕಾಯಿದೆ ಮತ್ತು ವಿದೇಶ ವಿವಾಹ ಕಾಯಿದೆ-ಹೀಗೆ ಏಳು ವೈಯಕ್ತಿಕ ಕಾನೂನುಗಳನ್ನೂ ತಿದ್ದುಪಡಿಗೊಳಿಸುವ ಪ್ರಸ್ತಾವನೆ ಹೊಂದಿರುವುದರಿಂದ ಅದು ವೈಯಕ್ತಿಕ ಕಾನೂನುಗಳನ್ನು ಅತಿಕ್ರಮಿಸುವ ಒಂದು ಯತ್ನವಾಗಿದೆ ಎಂದು ಈಗಾಗಲೇ ಹಲವು ಸಂಸದರ ಟೀಕೆ ಎದುರಿಸುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು