ವಿವಾಹ ನಿಶ್ಚಿತವಾಗಿದ್ದ ಯುವಕನ ಮರ್ಮಾಂಗ ಕತ್ತರಿಸಿದ ಸ್ನೇಹಿತ!

crime news
Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಖನೌ (05-12-2020): ವಿವಾಹ ನಿಶ್ಚಿತವಾಗಿದ್ದ ಯುವಕನ ಮರ್ಮಾಂಗವನ್ನು ದುಷ್ಕರ್ಮಿಗಳು ಕತ್ತರಿಸಿ ಹಾಕಿರುವ ಘಟನೆ ಉತ್ತರ ಪ್ರದೇಶದ ಕೊಟ್ವಾಲಿ ನಗರದ ಇಡ್ಗಾ ಪ್ರದೇಶದಲ್ಲಿ ನಡೆದಿದೆ.

ಸಮೀರ್​ ಎಂಬಾತನ ಮರ್ಮಾಂಗವನ್ನು ಕತ್ತರಿಸಲಾಗಿದೆ. ಈತನಿಗೆ ವಿವಾಹ ನಿಗದಿಯಾಗಿತ್ತು. ಈತ ಪರ್ವೇಜ್ ಎಂಬಾತನಿಂದ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದ. ಈ ವಿಚಾರವಾಗಿ ಆಗಾಗ ಇಬ್ಬರ ನಡುವೆ ಜಗಳವಾಗುತ್ತಿತ್ತು.

ಮದುವೆಗೆ ಮೂರು ದಿನದ ಮೊದಲು ಪರ್ವೇಜ್​ ಗೆಳೆಯರನ್ನು ಕಳುಹಿಸಿ ಹಣತರುವಂತೆ ಹೇಳಿದ್ದ, ಆದರೆ ಸಮೀರ್ ಇಲ್ಲ ಎಂದು ಹೇಳಿದ ಕಾರಣಕ್ಕೆ ಆತನನ್ನು ಕಾಡಿಗೆ ಹೊತ್ತೊಯ್ದು ಮರ್ಮಾಂಗವನ್ನು ಕತ್ತರಿಸಿದ್ದಾರೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಮೀರ್ ನನ್ನು ದುಷ್ಕರ್ಮಿಗಳು ಬಿಟ್ಟು ಪರಾರಿಯಾಗಿದ್ದು, ಆತ ಮನೆಗೆ ಜೀವನ್ಮರಣ ಸ್ಥಿತಿಯಲ್ಲಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ತಕ್ಷಣ ಎಚ್ಚೆತ್ತ ಮನೆಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು