ಸಿಕಾರ್ (24-02-2021): ಕೇಂದ್ರವು ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ, ಪ್ರತಿಭಟನಾ ನಿರತ ರೈತರು ಸಂಸತ್ತಿಗೆ ಘೇರಾವ್ ಹಾಕಲಿದ್ದಾರೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದು, ದೆಹಲಿ ಮೆರವಣಿಗೆ ತೆರಳಲು ಯಾವುದೇ ಸಮಯದಲ್ಲಿ ಕರೆ ನೀಡಬಹುದು, ಇದಕ್ಕೆ ಸಿದ್ದರಾಗಬೇಕು ಎಂದು ಹೇಳಿದ್ದಾರೆ.
ಟಿಕಾಯತ್ ರಾಜಸ್ಥಾನದ ಸಿಕಾರ್ ನಲ್ಲಿ ಯುನೈಟೆಡ್ ಕಿಸಾನ್ ಮೋರ್ಚಾದ ಕಿಸಾನ್ ಮಹಾಪಂಚಾಯತ್ ಆಯೋಜಿಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಈ ಬಾರಿ ಸಂಸತ್ತು ಘೆರಾವ್ಗೆ ಕರೆ ನೀಡುತ್ತೇವೆ. ನಾವು ಅದನ್ನು ಘೋಷಿಸಿ ನಂತರ ದೆಹಲಿಯತ್ತ ಸಾಗುತ್ತೇವೆ. ಈ ಬಾರಿ ನಾಲ್ಕು ಲಕ್ಷ ಟ್ರಾಕ್ಟರುಗಳ ಬದಲು 40 ಲಕ್ಷ ಟ್ರಾಕ್ಟರುಗಳು ಇರಲಿವೆ. ಪ್ರತಿಭಟನಾ ನಿರತ ರೈತರು ಇಂಡಿಯಾ ಗೇಟ್ ಬಳಿಯ ಉದ್ಯಾನವನಗಳನ್ನು ಉಳುಮೆ ಮಾಡಿ ಅಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ ಎಂದು ಹೇಳಿದ್ದಾರೆ.
ಸಂಸತ್ತನ್ನು ಘೆರಾವ್ ಮಾಡುವ ದಿನಾಂಕವನ್ನು ಯುನೈಟೆಡ್ ಫ್ರಂಟ್ ನಾಯಕರು ನಿರ್ಧರಿಸುತ್ತಾರೆ. ಜ.26ರ ಟ್ರಾಕ್ಟರ್ ಪೆರೇಡ್ ಸಮಯದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ನಡೆಸಲಾಗಿದೆ. ರೈತರ ವಿರುದ್ಧ ಪಿತೂರಿ ನಡೆಸಲಾಗಿದೆ. ದೇಶದ ರೈತರು ತ್ರಿವರ್ಣವನ್ನು ಪ್ರೀತಿಸುತ್ತಾರೆ ಎಂದು ಹೇಳಿದ್ದಾರೆ.