ಬೆಂಗಳೂರು: ಭಾರತ ಒಕ್ಕೂಟ ಸರಕಾರವು ಜಾರಿಗೆ ತಂದಿರುವ ವಿವಾದಾಸ್ಪದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಅಖಿಲ ಕರ್ನಾಟಕ ಬಂದ್ ಘೋಷಣೆ ಮಾಡಲಾಗಿದೆ.
ರೈತ ಮುಖಂಡರಾದ ದರ್ಶನ್ ಪಾಲ್, ರಾಕೇಶ್ ಟಿಕಾಯತ್ ಮತ್ತು ಯದುವೀರ್ ಸಿಂಗ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಸೌಧ ಚಲೋ ರ್ಯಾಲಿಯಲ್ಲಿ ಸಂಯುಕ್ತ ಹೋರಾಟ ವೇದಿಕೆಯು ಈ ಬಂದ್ಗೆ ಕರೆ ನೀಡಿದೆ.
ಕಳೆದ ನಾಲ್ಕು ತಿಂಗಳಿನಿಂದ ದೆಹಲಿಯನ್ನು ಕೇಂದ್ರವಾಗಿಸಿ ನಡೆಯುತ್ತಿರುವ ರೈತ ಚಳವಳಿಯು ದೇಶಾದ್ಯಂತ ಹರಡುತ್ತಿವೆ. ಇದರ ಭಾಗವಾಗಿಯೇ ಈ ತಿಂಗಳ 20 ರಂದು ಶಿವಮೊಗ್ಗ ಮತ್ತು ಮಾರ್ಚ್ 21 ರಂದು ಹಾವೇರಿಯಲ್ಲೂ ರೈತ ಮಹಾಪಂಚಾಯತ್ಗಳು ಜರುಗಿವೆ.
ಜನವರಿ ಇಪ್ಪತ್ತಾರರಂದು ರೈತ ಚಳವಳಿಗೆ ನಾಲ್ಕು ತಿಂಗಳು ಪೂರ್ಣವಾಗುವುದರಿಂದ ಸಾಂಕೇತಿಕವಾಗಿ ದೇಶವ್ಯಾಪಿ ಮುಷ್ಕರ ನಡೆಯಲಿದ್ದು, ಅಂಗಡಿ ಮುಂಗಟ್ಟುಗಳು ಹನ್ನೆರಡು ಗಂಟೆಗಳ ಕಾಲ ಮುಚ್ಚಲಿದೆ.