ಮರಾಠರಿಗೆ ಮೀಸಲಾತಿ ಇಲ್ಲ : ಸುಪ್ರೀಮ್ ಕೋರ್ಟ್ ನಿಂದ ಐತಿಹಾಸಿಕ ತೀರ್ಪು

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಮರಾಠರಿಗೆ ನೀಡಲಾಗಿದ್ದ ಮೀಸಲಾತಿಯು ಅಸಾಂವಿಧಾನಿಕ ಎಂದು ಘೋಷಿಸಿದ ಸುಪ್ರೀಮ್ ಕೋರ್ಟ್, ಅದನ್ನು ರದ್ದುಗೊಳಿಸಿ ತೀರ್ಪು ನೀಡಿದೆ. ಮರಾಠಿಗಳು ಹಿಂದುಳಿದ ಸಮುದಾಯದವರಲ್ಲ. ಅವರಿಗಾಗಿ ಪ್ರತ್ಯೇಕ ಮೀಸಲಾತಿ ಅಗತ್ಯವಿಲ್ಲ ಎಂದಿದೆ.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಮರಾಠ ಸಮುದಾಯವು ಮೀಸಲಾತಿ ಪಡೆಯಲು ಅವಕಾಶ ನೀಡಿದ್ದ 2018 ಮಹಾರಾಷ್ಟ್ರ ಕಾನೂನನ್ನು ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿ, ಅದನ್ನು ರದ್ದುಪಡಿಸಿದೆ.

1992 ಇಂದಿರಾ ಸಾವನಿ ಪ್ರಕರಣದಲ್ಲಿ ಹೊರಡಿಸಲಾಗಿದ್ದ ತನ್ನದೇ ತೀರ್ಪಿನಂತೆ ಮೀಸಲಾತಿಯು ಶೇಕಡಾ 50 ರ ಮಿತಿಯನ್ನು ದಾಟುವಂತಿಲ್ಲ ಎಂದು ಅಶೋಕ್ ಭೂಷಣ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ನ್ಯಾಯ ಪೀಠವು ತಿಳಿಸಿದೆ. ಅಬ್ದುಲ್ ನಝೀರ್, ರವೀಂದ್ರ ಭಟ್, ನಾಗೇಶ್ವರ ರಾವ್ ಹಾಗೂ ಹೇಮಂತ್ ಗುಪ್ತಾ ಇವರೇ ನ್ಯಾಯ ಪೀಠದಲ್ಲಿರುವ ಇತರ ನಾಲ್ವರು.

ಮರಾಠ ಸಮುದಾಯವನ್ನು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರದ ನಡೆಯನ್ನು ಅಮಾನ್ಯಗೊಳಿಸಿದ ನ್ಯಾಯಾಲಯ, ರಾಜ್ಯ ಸರಕಾರಕ್ಕೆ ತನ್ನ ರಾಜ್ಯದಲ್ಲಿರುವ ಹಿಂದುಳಿದ ಜಾತಿಗಳನ್ನು ಗುರುತಿಸಿ, ಅದನ್ನು ಅಂಗೀಕರಿಸುವಂತೆ ಕೇಂದ್ರಕ್ಕೆ ಸೂಚಿಸಬಹುದು. ಆದರೆ ನಿರ್ದಿಷ್ಠ ಜಾತಿಯನ್ನು ಸಾಮಾಜಿಕ ಅಥವಾ ಆರ್ಥಿಕವಾಗಿ ಹಿಂದುಳಿದವುಗಳ ಪಟ್ಟಿಗೆ ಸೇರಿಸುವ ಅಧಿಕಾರ ಇಲ್ಲ. ಅಧಿಕಾರ ರಾಷ್ಟ್ರಪತಿಗೆ ಮಾತ್ರ ಇರುವುದು ಎಂದಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು