ವಿಟ್ಲ; ಮರಕ್ಕಿನಿ ಬದರ್ ಹುಸೈನ್ ಜುಮಾ ಮಸೀದಿ ಉದ್ಘಾಟನೆ

skssf
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಂಟ್ವಾಳ(01/11/2020): ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮರಕ್ಕಿನಿ ಬದರ್ ಹುಸೈನ್ ನವೀಕೃತ ಜುಮಾ ಮಸೀದಿಯ ಉದ್ಘಾಟನಾ ಸಮಾರಂಭ ನಡೆಯಿತು.

ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಅಧ್ಯಕ್ಷ ಅಸೈಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ನವೀಕೃತ ಮಸೀದಿಯನ್ನು ಉದ್ಘಾಟಿಸಿ, ನಮಾಜ್‌ಗೆ ನೇತೃತ್ವ ನೀಡಿದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ದುವಾಃ ಆಶೀರ್ವಚನ ನೀಡಿ ಮಾತನಾಡಿ ಮಸೀದಿ ನಿರ್ಮಾಣ ಕಾರ್ಯ ಪವಿತ್ರ ಕಾರ್ಯವಾಗಿದೆ. ಶುದ್ಧವಾದ ಸ್ಥಳವೆಂದರೆ ಅದು ಮಸೀದಿ ಆಗಿರುತ್ತದೆ. ಅದರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಸೀದಿ ದೇವರು ಪ್ರಪಂಚದಲ್ಲಿ ಇಷ್ಟಪಡುವ ಸ್ಥಳವಾಗಿದೆ ಎಂದು ಹೇಳಿದರು.

ಬೆಳಿಗ್ಗೆ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಶರೀಫ್ ಮೂಸಾ ಕುದ್ದುಪದವು ಅವರ ಅಧ್ಯಕ್ಷತೆಯಲ್ಲಿ ಜುಮಾ ಮಸೀದಿಯಲ್ಲಿ ಸೇವೆಗೈದ ಉಸ್ತಾದರುಗಳ ಬೃಹತ್ ಸೇವಾ ಸಂಗಮ ನಡೆಯಿತು. ಕಮರ್ ದಫ್ ತಂಡ ಕುಕ್ಕಾಜೆ ಅವರಿಂದ ದಫ್ ಪ್ರದರ್ಶನ ನಡೆಯಿತು. ಮರಕ್ಕಿನಿ, ಕುದ್ದುಪದವು ಮತ್ತು ಅಡ್ಯನಡ್ಕ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ತಂಡದ ಸದಸ್ಯರು ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಿದರು. ಮಧ್ಯಾಹ್ನ ಅನ್ನದಾನ ನಡೆಯಿತು.

ಮಸೀದಿ ಆಡಳಿತ ಸಮಿತಿ ವತಿಯಿಂದ ಮುತ್ತುಕೋಯ ತಂಙಳ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಕೃಷಿಕ ಕೃಷ್ಣ ಭಟ್ ಮರಕ್ಕಿನಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಎನ್‌ಪಿಎಂ ಝೈನುಲ್ ಅಬಿದೀನ್ ತಂಙಳ್ ಕೇರಳ ಅಧ್ಯಕ್ಷತೆ ವಹಿಸಿದ್ದರು.

ಮೀರ್ ಝಾಹಿದ್ ಅಲ್ ಬುಖಾರಿ ತಂಙಳ್ ಮಂಜೇಶ್ವರ, ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಶರೀಫ್ ಮೂಸಾ ಕುದ್ದುಪದವು, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಹಾಜಿ, ಮಸೀದಿ ಖತೀಬು ನೌಫಲ್ ಹುಸೈನ್ ಫೈಝಿ, ಜಿಲ್ಲಾ ಪಂಚಾಯತ್ ಸದಸ್ಯ ಎಂ ಎಸ್ ಮಹಮ್ಮದ್, ಉಕ್ಕುಡ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ರಶೀದ್ ವಿಟ್ಲ, ವಿಟ್ಲ ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷ ಅಶ್ರಫ್ ಮಾಣಿಮಜಲು, ಕಾರ್ಯದರ್ಶಿ ರಫೀಕ್ ಮುಸ್ಲಿಯಾರ್, ಅಬೂಬಕ್ಕರ್ ಫೈಝಿ ದೇಲಂಪಾಡಿ, ತಲಂಗಾರ ಖತೀಬು ಹಮೀದ್ ಫೈಝಿ ಅಡೂರು, ಅಡ್ಯನಡ್ಕ ಖತೀಬು ಅಬ್ದುಲ್ ರಹಿಮಾನಿ, ಅಡ್ಕಸ್ಥಳ ಮುದರಿಸ್ ಅಬ್ದುಲ್ ರಝಾಕ್ ಮಿಸ್ಬಾಯಿ, ಬೆಳ್ಳಾರೆ ಮುದರಿಸ್ ತಾಜುದ್ದೀನ್ ರಹಿಮಾನಿ, ಕೇಪು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕರೀಂ ಕುದ್ದುಪದವು, ಅಲಿ ಮಾಣಿಪದವು, ಎಸ್ ಮೊಹಮ್ಮದ್, ಬದ್ರುದ್ದೀನ್ ಮರಕ್ಕಿನಿ ಮೊದಲಾದವರು ಉಪಸ್ಥಿತರಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು