ಬೆಂಗಳೂರು(26-10-2020): ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ ಅವರ ಸಾವಿಗೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರಣ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಪಕ್ಷದ ಕಚೇರಿಯಲ್ಲಿ ಮಾತನಾಡಿದ ಸದಾನಂದ ಗೌಡ, ಕೇಂದ್ರದ ಕಾಯ್ದೆಗಳನ್ನು ವಿರೋಸಲು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಾರುತಿ ಮಾನ್ಪಡೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರ ಪರಿಣಾಮ ಕೊರೊನಾ ಸೋಂಕು ಆವರಿಸಿ ಸಾವನ್ನಪ್ಪಿದರು. ಇದಕ್ಕೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಕಾರಣಕರ್ತರು ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಅನೇಕರು ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿದೆ ಎಂದು ರೈತರನ್ನು ಬೀದಿಗೆ ತಂದು ನಿಲ್ಲಿಸಿದರು. ಇದರಿಂದ ಕೊರೊನಾ ಸೋಂಕು ಹಬ್ಬಿತು ಎಂದು ಹೇಳಿಕೆ ಕೊಟ್ಟು ಚರ್ಚೆಗೆ ಗ್ರಾಸವಾಗಿದ್ದಾರೆ.
ರೈತರನ್ನು ಹಳ್ಳಿಯಿಂದ ಕರೆತಂದಿದ್ದೇ ಕಾಂಗ್ರೆಸಿಗರು. ರೈತರು ಬರುವುದಿಲ್ಲ ಎಂದಾಗ ಬಾಡಿಗೆಗೆ ಕರೆತರಲಾಯಿತು. ಪ್ರತಿಭಟನೆ ನಡೆಸಿ ಕೊರೊನಾ ಸೋಂಕು ಹಬ್ಬಿಸಿದಿರಿ ಎಂದು ಸದಾನಂದ ಗೌಡ ಹೇಳಿದ್ದಾರೆ.