ಮಂಗಳೂರು(31-10-2020): ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇಲೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ.ಅರಬಿ ಅವರನ್ನು ಅಮಾನತುಗೊಳಿಸಲಾಗಿದೆ.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ 2ವರ್ಷಗಳ ಬಳಿಕ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಸಂಶೋಧನಾ ವಿದ್ಯಾರ್ಥಿನಿಯು ತನಗೆ ಪ್ರೊಫೆಸರಿಂದ ಲೈಂಗಿಕ ಕಿರುಕುಳವಾಗುತ್ತಿದೆ ಎಂದು 2018ರಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು.
ಆಗ ವಿವಿ ಆಡಳಿತ ಸಮಿತಿ ಈ ಪ್ರಕರಣದ ತನಿಖೆ ಕೈಗೊಂಡು ವರದಿಯನ್ನು ಆಗಿನ ಕುಲಸಚಿವ ಎ.ಎಂ. ಖಾನ್ ಅವರಿಗೆ ಸಲ್ಲಿಸಿತ್ತು. ಆದರೆ ಖಾನ್ ವರದಿಯನ್ನು ಮುಚ್ಚಿಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.