69 ವರ್ಷಗಳಿಂದ ಸರಕಾರಿ ಸ್ವಾಮ್ಯದಲ್ಲಿದ್ದ ಮಂಗಳೂರು ವಿಮಾನ ನಿಲ್ಧಾಣದಲ್ಲಿ ಇನ್ನು ಅದಾನಿ ದರ್ಬಾರ್!

mangalore airport
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಗಳೂರು(16-10-2020): ಸರಕಾರಿ ಅದೀನದಲ್ಲಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣವನ್ನು ಈ ತಿಂಗಳ ಅ.24ರ ಸರಿಸುಮಾರು ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಗೆ ವಹಿಸಿಕೊಡಲು ಮುಹೂರ್ತ ನಿಗದಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೇಂದ್ರ ಸರಕಾರದ ಖಾಸಗೀಕರಣದ ಭಾಗವಾಗಿ 69 ವರ್ಷಗಳಿಂದ ಸರಕಾರಿ ಸ್ವಾಮ್ಯದಲ್ಲಿದ್ದ ಮಂಗಳೂರು ವಿಮಾನ ನಿಲ್ದಾಣ ಖಾಸಗಿಯ ಪಾಲಾಗಲಿದೆ.

ನ.14ರ ಒಳಗೆ ಹಸ್ತಾಂತರ ಪ್ರಕ್ರಿಯೆ ಮುಗಿಯಬೇಕೆಂಬ ಕರಾರು ಇದೆ. ಆದ್ದರಿಂದ ಅ.24ರ ಮಧ್ಯರಾತ್ರಿಯಿಂದ ಅಥವಾ ನ. 1ರಿಂದ ಏರ್‌ಪೋರ್ಟ್‌ ನಿರ್ವಹಣೆಯ ಹೊಣೆ ಅದಾನಿ ಸಂಸ್ಥೆಗೆ ಅಧಿಕೃತವಾಗಿ ಹಸ್ತಾಂತರವಾಗಲಿದೆ.

ಕೇಂದ್ರ ಸರಕಾರದ ಏರ್ ಪೋರ್ಟ್ ಗಳ ಖಾಸಗೀಕರಣದ ನಿಲುವಿನ ವಿರುದ್ಧ ವ್ಯಾಪಕವಾಗಿ ವಿರೋಧ ವ್ಯಕ್ತವಾಗಿತ್ತು. ಆದರೆ ಜನರ ಬೇಡಿಕೆಗೆ ಮಣಿಯದೆ ಸರಕಾರ ಅದಾನಿಗೆ ವಿಮಾನ ನಿಲ್ಧಾಣವನ್ನು ವಹಿಸಿಕೊಟ್ಟಿದೆ. ಅದಾನಿ ಸಂಸ್ಥೆ ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಕೋಟ್ಯಂತರ ರೂ. ಹೂಡಿಕೆ ಮಾಡುವ ಸಾಧ್ಯತೆಯಿದೆ. ರನ್‌ವೇ ವಿಸ್ತರಣೆ, ಡೆಲ್ಲಿ-ಮುಂಬಯಿ ಏರ್‌ಪೋರ್ಟ್‌ ಮಾದರಿಯಲ್ಲಿ ಮಂಗಳೂರಿನಲ್ಲೂ ಪ್ರತ್ಯೇಕ ಕಾಂಪ್ಲೆಕ್ಸ್‌, ಮಾಲ್‌ಗ‌ಳು ಬರಲಿವೆ. ಇದರ ಜೊತೆಗೆ ಶುಲ್ಕ ಪರಿಷ್ಕರಣೆ ಕೂಡ ನಡೆಯಲಿದೆ ಎನ್ನಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು