ಮಂಗಳೂರು(27-11-2020): ಮಂಗಳೂರಿನಲ್ಲಿ ಅಪಾರ್ಟ್ ಮೆಂಟ್ ವೊಂದರ ಕಾಂಪೌಂಡ್ ಮೇಲೆ ಬರೆದ ಗೋಡೆ ಬರಹವೊಂದು ಸುದ್ದಿಯಾಗಿದೆ.
ಕಿಡಿಗೇಡಿಗಳು ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯ ಕಾಂಪೌಂಡ್ ಗೋಡೆ ಮೇಲೆ ಲಷ್ಕರ್ ಜಿಂದಾಬಾದ್ ಎಂದು ಬರೆದಿದ್ದಾರೆ. ಸ್ಥಳಕ್ಕೆ ಕದ್ರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.
ವಿವಾದಿತ ಗೋಡೆ ಬರಹವನ್ನು ಪೊಲೀಸರು ಮುಚ್ಚಿದ್ದು, ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.