ಮಹತ್ವದ ಮಾಹಿತಿ| ಮೊಬೈಲ್ ಗೆ ಕರೆ ಮಾಡಲು ಸೊನ್ನೆ ನಮೂದಿಸುವುದು ಕಡ್ಡಾಯ

mobile phone
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(26-11-2020): ಇನ್ನು ಮುಂದೆ ಮೊಬೈಲ್ ಗೆ ಲ್ಯಾಂಡ್ ಲೈನ್ ಫೋನ್ ನಿಂದ ಕರೆ ಮಾಡಲು ಸೊನ್ನೆಯನ್ನು ಮೊದಲು ನಮೂದಿಸುವುದು ಕಡ್ಡಾಯವಾಗಿದೆ.

ಈ ಬಗ್ಗೆ ಟೆಲಿಕಾಂ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಜನವರಿ 15 ರಿಂದ ನೂತನ ವಿಧಾನ ಚಾಲ್ತಿಗೆ ಬರಲಿದೆ. ಭಾರತದಲ್ಲಿ ಲ್ಯಾಂಡ್ ಲೈನ್ ಫೋನ್ ಬಳಕೆದಾರರ ಸಂಖ್ಯೆ ಇಳಿಕೆಯಾಗಿದೆ. ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದಾಗಿ ಹೆಚ್ಚಿನ ಮೊಬೈಲ್ ನಂಬರ್ ಗಳು ಲಭ್ಯವಾಗುವಂತೆ ಮಾಡಲು ಲ್ಯಾಂಡ್ ಲೈನ್ ನಿಂದ ಕರೆ ಮಾಡುವಾಗ 10 ಸಂಖ್ಯೆಯ ಮೊಬೈಲ್ ನಂಬರನ್ನು ನಮೂದಿಸುವ ಮೊದಲು 0ಯನ್ನು ಸೇರಿಸಿ ನಮೂದಿಸಬೇಕೆಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಈ ಮೊದಲು ಶಿಫಾರಸ್ಸು ಮಾಡಿತ್ತು. ಅದರಂತೆ ಸರಕಾರ ಸುಚನೆಯನ್ನು ನೀಡಿದೆ.

ನೂತನ ಬದಲಾವಣೆಗಳಿಂದ ಮೊಬೈಲ್ ಸೇವೆಗೆ 254.4 ಕೋಟಿ ನಂಬರ್ ಗಳು ಸೇರ್ಪಡೆಯಾಗಲಿವೆ ಎನ್ನಲಾಗಿದೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು