ಬಂಟ್ವಾಳ (08-10-2020): ಮಂಚಿ ಗ್ರಾಮ ಪಂಚಾಯತ್ ಒಳಪಟ್ಟ ಎಸ್ ಡಿ ಪಿ ಐ ಪಕ್ಷದ ಅಭ್ಯರ್ಥಿ ಘೋಷಣಾ ಕಾರ್ಯಕ್ರಮ SDPI ಮಂಚಿ ವಲಯ ಸಮಿತಿ ಗ್ರಾಮದ ಅಧ್ಯಕ್ಷರಾದ ನವಾಜ್ ಕೋಡಿಬೈಲ್ ಅದ್ಯಕ್ಷತೆಯಲ್ಲಿ ಕುಕ್ಕಾಜೆ SDPI ಕಛೇರಿಯಲ್ಲಿ ನಡೆಯಿತು
ಕಾರ್ಯಕ್ರಮದ ಮುಖ್ಯಅತಿಥಿ SDPI ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಲಂದರ್ ಪರ್ತಿಪಾಡಿ ಮಾತನಾಡಿ ಎಸ್ ಡಿ ಪಿ ಐ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಚುನಾಯಿಸಿ ಅಭಿವೃದ್ಧಿ ಪರವಾದ ವಾರ್ಡ್, ಪಂಚಾಯತನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಸಭೆಯನ್ನು ಉದ್ದೇಶಿಸಿ ಮಾತಾಡಿದರು.
ಮಹ್ಮೂದ್ ಕಡಂಬು SDPI ಪಕ್ಷದ ಧ್ಯೇಯ ಉದ್ದೇಶಗಳ ಬಗ್ಗೆ ಮಾತನಾಡಿದರು ಹಮೀದ್ ಮುಸ್ಲಿಯಾರ್ ಸದಸ್ಯರು ಇಮಾಮ್ ಕೌನ್ಸಿಲ್ ದ.ಕ ಸಮಾರೋಪ ಭಾಷಣ ಮಾಡಿದರು.
ಫೈಝಲ್ ಮಂಚಿ ಸದಸ್ಯರು SDPI ಬಂಟ್ವಾಳ ಕ್ಷೇತ್ರ ಸಮಿತಿ ಹಾಗು PFI ನಾಯಕರಾದ ಹಮೀದ್ ಬೊಳಂತೂರು, ಸಿರಾಜ್ ಕಡಂಬು ಭಾಗವಹಿಸಿದ್ದರು.
ಮಂಚಿ ಗ್ರಾಮದ 6 ವಾರ್ಡಿನ ಸ್ಪರ್ಧೆಯನ್ನು ಖಚಿತಪಡಿಸಿ ಇದರ ಪ್ರಥಮ ಹಂತದ 3 ವಾರ್ಡ್ ನ ಅಭ್ಯರ್ಥಿ ಘೋಷಣೆಯನ್ನು ಎಸ್ ಡಿ ಪಿ ಐ ಮಂಚಿ ವಲಯ ಸಮಿತಿ ಉಸ್ತುವಾರಿಯಾದ ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಲಂದರ್ ಪರ್ತಿಪಾಡಿ ಅಭ್ಯರ್ಥಿ ಘೋಷಣೆ ಮಾಡಿದರು. ಪದವು, ನಳ, ಮಂಚಿ ಮೂರು ವಾರ್ಡ್ನಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲು ಈ ವೇಳೆ ತೀರ್ಮಾನಿಸಲಾಗಿದೆ.
2 ನೇ ಹಂತದ ಅಭ್ಯರ್ಥಿ ಪಟ್ಟಿ ಮುಂದಿನ ಸುತ್ತಿನ ಸಭೆಯಲ್ಲಿ ಬಿಡುಗಡೆ ಗೊಳಿಸಲಾಗುವುದು. ಈ ಕಾರ್ಯಕ್ರಮವನ್ನು SDPI ಮಂಚಿ ವಲಯ ಸಮಿತಿ ಕಾರ್ಯದರ್ಶಿ DN ಫಾರೂಕ್ ಮಂಚಿ ಸ್ವಾಗತಿಸಿ ನಿರೂಪಿಸಿದರು.