ಮಂಚಿ(10-2020):ಮೀಲಾದ್ ದಿನ ಆಚರಣೆ ಅಂಗವಾಗಿ ರಿಫಾಯಿಯ ಜುಮ್ಮಾ ಮಸೀದಿ ಮಂಚಿ ಇದರ ಅಂಗ ಸಂಸ್ಥೆಯಾದ ಹಿಮಯತ್ತುಲ್ ಇಸ್ಲಾಮ್ ಮದರಸ ಮಂಚಿ ವಿದ್ಯಾರ್ಥಿಗಳಿಂದ ಬೆಂಕಿ ರಹಿತ ಅಡುಗೆ ಸ್ಪರ್ಧೆ ಮದ್ರಸ ವಠಾರದಲ್ಲಿ ನಡೆಯಿತು.
ವಿವಿಧ ಬಗೆಯ ವಿಶಿಷ್ಟವಾದ ತಿಂಡಿ ತಿನಿಸುಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದರು.
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ರಿಫಾಯಿಯ ಜುಮಾ ಮಸೀದಿ ಅಧ್ಯಕ್ಷರಾದ ಇಬ್ರಾಹಿಮ್ ಕೋಕಳ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರಿಫಾಯಿಯ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ರಝಕ್ ಸಖಾಫಿ ಸದರ್ ಉಸ್ತಾದ್ ಇಬ್ರಾಯಿಂ ಮದನಿ, ಮುಹಝ್ಝೀನ್ ರಝ್ಝಕ್ ಹನೀಫಿ ಹಾಗು RJM ಆಡಳಿತಿ ಕಮಿಟಿ ಜೊತೆ ಕಾರ್ಯದರ್ಶಿ D.N ಫಾರೂಕ್ ಸದಸ್ಯರಾದ ಬಶೀರ್ ಕೈಕಂಬ ಉಮ್ಮರ್ ಕೈಯ್ಯೂರು ಉಪಸ್ಥಿತರಿದ್ದರು.