ಬೆಂಗಳೂರು(06-10-2020):ಪ್ರತಿಷ್ಠಿತ ಕಂಪೆನಿಯ ಮ್ಯಾನೇಜರ್ ಹುದ್ದೆ ಬಿಟ್ಟು ಸರಕಳ್ಳತನಕ್ಕೆ ಇಳಿದಿದ್ದ ವ್ಯಕ್ತಿಯೋರ್ವ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಬನಶಂಕರಿ ನಿವಾಸಿ ತಮಿಳುನಾಡು ಮೂಲದ ಜಯಕುಮಾರ್ (42) ಬಂಧಿತ ಆರೋಪಿ. ಈತ ಆ.8ರ ರಾತ್ರಿ ನೆಲಗದರನಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಿದ್ದಗಂಗಮ್ಮ ಕುತ್ತಿಗೆಯಿಂದ ಚಿನ್ನದಸರ ದೋಚಿ ಪರಾರಿಯಾಗಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಈತ ಕಳ್ಳತನ ನಡೆಸಿರುವುದು ತಿಳಿದು ಬಂದಿದೆ.
ಜಯಕುಮಾರ್ 2012ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದ. ಈ ವೇಳೆ ಪಬ್, ಬಾರ್ಗಳಿಗೆ ಹೋಗಿ ಪಾರ್ಟಿ ಮಾಡುತ್ತಿದ್ದ. ಮದ್ಯಸೇವನೆ ಹಾಗೂ ಜೂಜಾಟಕ್ಕೆ ದಾಸನಾಗಿದ್ದ. ಶೋಕಿಗೆ ಹಣ ಸಾಕಾಗುವುದಿಲ್ಲ ಎಂದು ಈತ ಕಳ್ಳತನದ ಹಾದಿ ಹಿಡಿದಿದ್ದ. ಕಾರ್ತಿಕ್ ಮತ್ತು ಅರುಣ್ ಎಂಬುವರ ಜತೆಗೂಡಿ ಈತ ಸರಗಳ್ಳತನ ಮಾಡುತ್ತಿದ್ದ. ಆರೋಪಿ ವಿರುದ್ಧ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ 22 ಹಾಗೂ ತಮಿಳುನಾಡಿನಲ್ಲಿ 12 ಸರಗಳ್ಳತನ ಪ್ರಕರಣಗಳಿವೆ.