ಬಂಡಾ(26-10-2020): ಉತ್ತರ ಪ್ರದೇಶದ ಬಾಬೆರು ಪ್ರದೇಶದ ಭತಿ ಗ್ರಾಮದಲ್ಲಿರುವ ದೇವಸ್ಥಾನವೊಂದರಲ್ಲಿ 22 ವರ್ಷದ ಯುವಕನೊಬ್ಬ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮ ರಾಮ್ (22) ಎಂಬಾತ ದೇವಸ್ಥಾನದಲ್ಲಿ ನಾಲಿಗೆಯನ್ನು ಕತ್ತರಿಸಿ ದೇವರಿಗೆ ಅರ್ಪಿಸಿದ್ದಾನೆ ಎಂದು ಎಸ್ಎಚ್ಒ ಜೈ ಶ್ಯಾಮ್ ಶುಕ್ಲಾ ಹೇಳಿದ್ದಾರೆ.
ನಂತರ ಪೊಲೀಸರು ಸ್ಥಳಕ್ಕೆ ತೆರಳಿ ವ್ಯಕ್ತಿಯನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ಆತ್ಮ ರಾಮ್ ಅವರ ತಂದೆ ರಾಮ್ ಸಿಂಗ್ ಅವರು ತಮ್ಮ ಮಗ ಮಾನಸಿಕ ಅಸ್ವಸ್ಥರಾಗಿದ್ದಾರೆ ಮತ್ತು ” ನವರಾತ್ರಿ ” ನಲ್ಲಿ ಒಂಬತ್ತು ದಿನಗಳ ಉಪವಾಸವನ್ನು ಆಚರಿಸುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ಕೃತ್ಯ ಎಸಗುವಂತೆ ಕೆಲವರು ತಮ್ಮ ಮಗನನ್ನು ದಾರಿ ತಪ್ಪಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.