ಎಂಎಲ್‌ಸಿ ಮನೆಯಲ್ಲೇ ನಡೆಯಿತು ಘೋರ ಕೃತ್ಯ: ಕುಡಿದ ಮತ್ತಿನಲ್ಲಿ ಓರ್ವನ ಗುಂಡಿಟ್ಟು ಹತ್ಯೆ

shot dead
Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ (21-11-2020): ಉತ್ತರ ಪ್ರದೇಶದ ಹಜರತ್‌ಗಂಜ್ ಕೊಟ್ವಾಲಿ ಪ್ರದೇಶದ ಸಮಾಜವಾದಿ ಪಕ್ಷದ ಎಂಎಲ್‌ಸಿಯ ಅಧಿಕೃತ ನಿವಾಸದಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಯುತ್ತಿದೆ.

ಪೊಲೀಸರ ಪ್ರಕಾರ, ಶುಕ್ರವಾರ ರಾತ್ರಿ ವಿನಯ್ ಯಾದವ್ ಎಂಬ ವ್ಯಕ್ತಿಯ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಬರಾಬಂಕಿ ಜಿಲ್ಲೆಯ ರಾಕೇಶ್ ರಾವತ್ ಸಾವನ್ನಪ್ಪಿದ್ದಾರೆ.

ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಐದು ಜನರು ಹಾಜರಿದ್ದರು ಎಂದು ಹಜರತ್‌ಗಂಜ್ ಎಸಿಪಿ ರಾಘವೇಂದ್ರ ಮಿಶ್ರಾ ತಿಳಿಸಿದ್ದಾರೆ.

ಎಲ್ಲರೂ ಮದ್ಯಪಾನ ಮಾಡಿದ್ದರು. ಆರೋಪಿಯೊಬ್ಬರಲ್ಲಿ ಗನ್ ಇತ್ತು. ವ್ಯಕ್ತಿಯು ಆಕಸ್ಮಿಕವಾಗಿ ಗುಂಡು ಹಾರಿಸಿದ್ದಾನೆ ಮತ್ತು ಗುಂಡು ರಾಕೇಶ್ ಗೆ ತಗುಲಿದೆ ಎಂದು ಪೊಲೀಸರು ಹೇಳಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು