ಇನ್ಸುರೆನ್ಸ್ ಪಡೆಯಲು ಪತ್ನಿಯನ್ನು ಕೊಂದ ಸಿಎ | 60ಲಕ್ಷ ವಿಮೆ ಪ್ಲ್ಯಾನ್ ಹಾಕಿದ್ದ ಕಿಲಾಡಿ ಅಂದರ್

police
Share on facebook
Share on twitter
Share on linkedin
Share on whatsapp
Share on telegram
Share on email
Share on print

ಗುಜರಾತ್‌(07-02-2020): ಗುಜರಾತ್‌ನ ಬನಸ್ಕಂತ ಜಿಲ್ಲೆಯಲ್ಲಿ ಚಾರ್ಟೆಂಡ್ ಎಕೌಂಟೆಂಟ್ ಓರ್ವ ಪತ್ನಿಯನ್ನು ಕೊಂದು ಇನ್ಸುರೆನ್ಸ್ ಕ್ಲೈಮ್ ಮಾಡಿಸಲು ಅಪಘಾತ ಎಂದು ಬಿಂಬಿಸಿರುವ ಘಟನೆ ನಡೆದಿದೆ.

ಕಳೆದ ವರ್ಷ ಡಿಸೆಂಬರ್ 26 ರಂದು ದಕ್ಷಬೆನ್ ತಾಂಕ್ ಎಂದು ಗುರುತಿಸಲ್ಪಟ್ಟ ಮಹಿಳೆ ಅಪಘಾತದಲ್ಲಿ ಸಾವನ್ನಪ್ಪಿದ ನಂತರ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆಯ ಕುಟುಂಬವು ಅಪಘಾತದ ಬಗ್ಗೆ ಕೆಲವು ಅನುಮಾನಗಳನ್ನು ಹುಟ್ಟುಹಾಕಿದ ನಂತರ, ನಾವು ಆಳವಾದ ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದೇವೆ. ಕರೆ ದತ್ತಾಂಶ ವಿಶ್ಲೇಷಣೆಯನ್ನು ಮಾಡಿದ್ದೇವೆ. ಈ ವೇಳೆ ವ್ಯವಸ್ಥಿತ ಕೊಲೆ ಎಂದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೊಲೆ ಕೃತ್ಯವನ್ನು ಅಪಘಾತದಂತೆ ಬಿಂಬಿಸಲು ಲಲಿತ್ ತ್ಯಾಂಕ್, ಕಿರಿತ್ ಮಾಲಿ ಎಂಬಾತನಿಗೆ 2ರೂ.ವನ್ನು ಲಕ್ಷವನ್ನು ಪಾವತಿಸಿದ್ದ. ಈತ ವಿಮಾ ಪಾಲಿಸಿಯಿಂದ 60 ಲಕ್ಷ ರೂ.ವನ್ನು ಪಡೆಯಲು ಈ ತಂತ್ರ ರೂಪಿಸಿದ್ದ ಎನ್ನುವುದು ತನಿಖೆ ವೇಳೆ ಬಹಿರಂಗವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು