ಸಂಕ್ರಾಂತಿ ದುರಂತ: ಪ್ರಾಣಿ ಬದಲು ಮದ್ಯದ ಮತ್ತಿನಲ್ಲಿ ಮೇಕೆ ತಲೆ ಹಿಡಿದಿದ್ದ ವ್ಯಕ್ತಿಯನ್ನು ಬಲಿ ಕೊಟ್ಟ ಕುಡುಕ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಿಜಯವಾಡ: ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಪ್ರಾಣಿಯನ್ನು ಬಲಿ ಕೊಡುವ ಬದಲು ಮನುಷ್ಯನ ಕುತ್ತಿಗೆಯನ್ನು ಕುಯ್ದಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಭಾನುವಾರ (ಜ.16) ನಡೆದಿದೆ. ಸಂಕ್ರಾಂತಿ ಸಂಭ್ರದಮ ನಡುವೆ ಈ ಘಟನೆ ನಡೆದಿದೆ.

ಚಲಪತಿ ಎಂಬಾತ ದೇವರಿಗೆ ಮೇಕೆಯನ್ನು ಬಲಿ ಕೊಡಲು ಮುಂದಾಗಿದ್ದ. ಆದರೆ, ತುಂಬಾ ಮದ್ಯ ಸೇವಿಸಿದ್ದರಿಂದ ಮೇಕೆಯನ್ನು ಹಿಡಿದುಕೊಂಡಿದ್ದ ಸುರೇಶ್​ ಎಂಬಾತನ ಕುತ್ತಿಗೆಯನ್ನು ಕುಯ್ದಿದ್ದಾನೆ.

ಸ್ಥಳೀಯ ಎಲ್ಲಮ್ಮ ದೇವಸ್ಥಾನದಲ್ಲಿ ಪ್ರಾಣಿ ಬಲಿಯನ್ನು ಆಯೋಜಿಸಲಾಗಿತ್ತು. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಸುರೇಶ್​ನನ್ನು ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.

ಈ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಚಲಪತಿಯನ್ನು ಬಂಧಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು