ಬೆಂಗಳೂರು(13-11-2020): 3 ಮಂದಿ ಮಕ್ಕಳಿಗೆ ನೇಣುಬಿಗಿದು ಕೊಲೆ ಮಾಡಿ ತಂದೆ ಕೂಡ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ದಯಾನೀಯ ಘಟನೆ ಬೆಂಗಳೂರಿನ ಮೈಕೋ ಲೇಔಟ್ ನಲ್ಲಿ ನಡೆದಿದೆ.
ಜನಕರಾಜ್ ಬಿಸ್ತಾ ಎಂಬಾತ ತನ್ನ ಮಕ್ಕಳಾದ ಸರಸ್ವತಿ (14), ಹೇಮತಿ (9) ಮತ್ತು ರಾಜಕುಮಾರ್ (3) ಇವರಿಗೆ ನೇಣುಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ.
ಜನಕರಾಜ್ ಬಿಸ್ತಾ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಕೃತ್ಯಕ್ಕೆ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಈ ಕುರಿತು ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.