ವೈದ್ಯರು ಸತ್ತಿದ್ದಾನೆಂದು ಸರ್ಟಿಫಿಕೇಟ್ ಕೊಟ್ಟ ಯುವಕ ಅಂತ್ಯಸಂಸ್ಕಾರಕ್ಕೆ ಮೊದಲು ಜೀವಂತವಾದ!

MAN
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಣಿಪುರ(16-10-2020): ಮಣಿಪುರದ ಥೌಬಲ್ ಜಿಲ್ಲೆಯ 17 ವರ್ಷದ ಬಾಲಕನನ್ನು ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ವೈದ್ಯರು ಸತ್ತಿದ್ದಾನೆಂದು ಘೋಷಿಸಿದ್ದು, ಯುವಕ ಅಂತ್ಯಕ್ರಿಯೆಯ ಮೊದಲು ಜೀವಂತವಾಗಿರುವುದು ಕಂಡುಬಂದಿದೆ.

ಹೀರೋಕ್ ಭಾಗ -2 ರ ನಿವಾಸಿ ಎಲಾಂಗ್‌ಬಾಮ್ ನಿಂಗ್ಥೆಮ್ ಅವರ ಪುತ್ರ ಎಲಾಂಗ್‌ಬಾಮ್ ಮೋಚಾ ಅವರು ನಿನ್ನೆ ಕುದುರೆ ಒದೆಗೆ ಗಾಯಗೊಂಡಿದ್ದರು. ಹೊಟ್ಟೆಯಲ್ಲಿ ಗಾಯಗಳು ಕಾಣಿಸಿಕೊಂಡ ಬಳಿಕ ಮರುದಿನ ಅವರನ್ನು ಹೈರೋಕ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ಕರೆದೊಯ್ಯಲಾಯಿತು. ಅಲ್ಲಿಂದ ಅವರನ್ನು ಥೌಬಲ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಮತ್ತೆ ರಿಮ್ಸ್ ಇಂಫಾಲ್ಗೆ ಕರೆದೊಯ್ಯಲಾಗಿತ್ತು.

ಬಳಿಕ ರಿಮ್ಸ್ ಐಸಿಯು ವಾರ್ಡ್‌ನಲ್ಲಿ ದಾಖಲಿಸಲಾಗಿದ್ದು, ಬೆಳಿಗ್ಗೆ 10: 30 ರ ಸುಮಾರಿಗೆ ಅವರನ್ನು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಮತ್ತು ಮರಣ ಪ್ರಮಾಣಪತ್ರವನ್ನು ಕೂಡ ನೀಡಿದ್ದರು. ಯುವಕನನ್ನು ಅಂತ್ಯಸಂಸ್ಕಾರಕ್ಕೆಂದು ಮನೆಯವರು ಸಿದ್ಧತೆ ನಡೆಸಿದ್ದು, ಈ ವೇಳೆ ಆತ ಬದುಕಿರುವುದು ತಿಳಿದು ಬಂದಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು