ದಾವಣಗೆರೆ (29-11-2020): ವಿದ್ಯುತ್ ಶಾಕ್ ತಗುಲಿ ಲೈನ್ ಮ್ಯಾನ್ ಮೃತಪಟ್ಟ ಘಟನೆ ದಾವಣಗೆರೆಯ ಹರಿಹರದಲ್ಲಿ ನಡೆದಿದೆ.
ಮಾರುತಿ (24) ಮೃತಪಟ್ಟಿದ್ದು, ಮಹೇಶ್ (34) ಸ್ಥಿತಿ ಗಂಭೀರವಾಗಿದೆ. ಇವರಿಬ್ಬರು ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ನಿವಾಸಿಗಳಾಗಿದ್ದಾರೆ.
ವಿದ್ಯುತ್ ದುರಸ್ಥಿ ವೇಳೆ ತಂತಿಯಲ್ಲಿ ವಿದ್ಯುತ್ ಹರಿದು ದುರ್ಘಟನೆ ನಡೆದಿದೆ. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ಘಟನೆಯಲ್ಲಿ ಕಂಡು ಬಂದಿದೆ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಸಿಸ್ಟೆಂಟ್ ಇಂಜಿನಿಯರ್ ಹೇಳಿದ್ದಾರೆ.