ಕೆಲಸ ಸಿಕ್ಕಿದ್ರೆ ಆತ್ಮಹತ್ಯೆ ಮಾಡ್ತೇನೆಂದು ಹರಕೆ ಇಟ್ಟವ ಕೆಲಸ ಸಿಕ್ಕಿದ ತಕ್ಷಣ ಹರಕೆ ತೀರಿಸಿದ!

crime
Share on facebook
Share on twitter
Share on linkedin
Share on whatsapp
Share on telegram
Share on email
Share on print

ತಮಿಳುನಾಡು(01-11-2020): ಕೆಲಸ ಸಿಕ್ಕಿದ ತಕ್ಷಣ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹರಕೆ ಹಾಕಿದ್ದ ಯುವಕ ಕೆಲಸ ಸಿಕ್ಕಿದ ತಕ್ಷಣ ಆತ್ಮಹತ್ಯೆಯನ್ನು ಮಾಡಿಕೊಂಡಿರುವ ವಿಚಿತ್ರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ನಾಗರ್​​​ಕೊಯಿಲ್​​ ನಿವಾಸಿ ನವೀನ್​ (32) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಕೆಲಸ ಸಿಕ್ಕಿಲ್ಲ ಎಂದು ಮನನೊಂದಿದ್ದ.ಬಳಿಕ ಕೆಲಸ ಸಿಕ್ಕರೆ ನಾನು ನಿನ್ನನ್ನು ಸೇರುತ್ತೇನೆಂದು ಹರಕೆ ಮಾಡಿದ್ದ.

ಇತ್ತೀಚೆಗೆ ನವೀನ್​ಗೆ ಮುಂಬೈನ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಉದ್ಯೋಗ ಸಿಕ್ಕಿತ್ತು. ಅಲ್ಲಿ​ 15 ದಿನ ಕೆಲಸ  ಮಾಡಿದ ನವೀನ್ ಶುಕ್ರವಾರ ತನ್ನ ತಿರುವನಂತಪುರಂಗೆ ವಿಮಾನದ ಮೂಲಕ ತೆರಳಿದ್ದ. ಬಳಿಕ ನವೀನ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಆತ್ಮಹತ್ಯೆ ಕಾರಣ ಬರೆದ ಡೆತ್ ನೋಟು ಸಿಕ್ಕಿದೆ. ಈ ಕುರಿತು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು