ಫೋನ್ ನಲ್ಲಿ ತ್ರಿವಳಿ ತಲಾಖ್ ಹೇಳಿದ ಪತಿ: ಕೇಸ್ ದಾಖಲು

trippel thalaq
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಹಾರಾಷ್ಟ್ರ(23-11-2020):  ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಮಹಿಳೆಯೊಬ್ಬಳು ತನ್ನ 32 ವರ್ಷದ ಪತಿ ವಿರುದ್ಧ ತ್ರಿವಳಿ ತಲಾಖ್ ನ್ನು ಫೋನ್‌ ಮೂಲಕ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

31 ವರ್ಷದ ಮಹಿಳೆ ಈ ಹಿಂದೆ ಉದ್ಯೋಗಕ್ಕಾಗಿ ದುಬೈಗೆ ಮತ್ತು ಇತ್ತೀಚೆಗೆ ಅಹ್ಮದ್‌ನಗರಕ್ಕೆ ಹೋಗಿದ್ದರು. ಮುಂಬೈನಲ್ಲಿ ವಾಸಿಸುತ್ತಿರುವ ಅವರ ಪತಿ ನವೆಂಬರ್ 20 ರಂದು ಅವರನ್ನು ಕರೆ ಮಾಡಿ ತ್ರಿವಳಿ ತಲಾಖ್ ಹೇಳಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ದಂಪತಿಗೆ ಮೂರು ವರ್ಷದ ಮಗಳು ಇದ್ದಾಳೆ. ಮಹಿಳೆ ಈ ಕುರಿತು ಪೊಲೀಸ್ ದೂರು ದಾಖಲಿಸಿದ್ದು, ಇದರ ಆಧಾರದ ಮೇಲೆ ಅಹ್ಮದ್‌ನಗರದ ಭಿಂಗರ್ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ 2019 ರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು