ಮಂಗಳೂರು(29-10-2020): ದುಬೈಯಿಂದ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
24 ಕ್ಯಾರೆಟ್ ನ 614 ಗ್ರಾಂ ಚಿನ್ನವನ್ನು ಪುಡಿಪುಡಿ ಮಾಡಿ, ಮೈಗೆಲ್ಲಾ ಮೆತ್ತಿಕೊಂಡು ದುಬೈನಿಂದ ಮಂಗಳೂರಿಗೆ ಸ್ಪೈಸ್ ವಿಮಾನದ ಮೂಲಕ ಹಾರಿ ಬಂದಾತನನ್ನು ಬಂಧಿಸಲಾಗಿದೆ.
ಆರೋಪಿಯು ಚಿನ್ನವನ್ನು ಪೌಡರ್ ರೂಪದಲ್ಲಿ ಮಾರ್ಪಾಡು ಮಾಡಿ ಅನುಮಾನ ಬಾರದಂತೆ ದೇಹಕ್ಕೆ ಅಂಟಿಸಿಕೊಂಡು ಬಂದಿದ್ದ. ಇದರ ಬೆಲೆ ಮಾರುಕಟ್ಟೆಯಲ್ಲಿ ಬರೊಬ್ಬರಿ 32ಲಕ್ಷ ಎಂದು ತಿಳಿದು ಬಂದಿದೆ.