ಮಂಗಳೂರು(02-03-2021): ಮಹಿಳೆಯ ಸರ ಎಳೆದು ಪರಾರಿಯಾಗಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಉಳ್ಳಾಲದಲ್ಲಿ ಬಂಧಿಸಿದ್ದಾರೆ.
ಪಾನೇಲ ನಿವಾಸಿ ಇರ್ಷಾದ್ (23) ಬಂಧಿತ ಆರೋಪಿ. ಈತ ಬೋಳಿಯಾರ್ ನಿವಾಸಿ ಶಾಂಭವಿ ಅವರು ತೋಟದಿಂದ ಸೋಗೆ ತರುವಾಗ ಹಿಂದಿನಿಂದ ಬಂದು ಸರ ಎಳೆದುಕೊಂಡು ಪರಾರಿಯಾಗಿದ್ದ.
ಈ ಕುರಿತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇರ್ಷಾದ್ ನನ್ನು ಬಂಧಿಸಿದ್ದಾರೆ.