ಬುಲಂದ್ ಶಹರ್(07-10-2020): ಕೊಲೆ ಮತ್ತು ಅತ್ಯಾಚಾರದ ಆರೋಪಿಯಾಗಿದ್ದ ವ್ಯಕ್ತಿ ಜಾಮೀನಿನಿಂದ ಹೊರಬಂದು ಇನ್ನೊಬ್ಬನನ್ನು ಕೊಂದು ತಾನೇ ಸತ್ತಿದ್ದೇನೆ ಎಂದು ಹೈಡ್ರಾಮ ಮಾಡಿ ಸಿಕ್ಕಿಬಿದ್ದಿದ್ದಾನೆ.
ರಾಜ್ ಕುಮಾರ್ ಎಂಬ ಆರೋಪಿ, ತನ್ನ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳಿಂದ ಪಾರಾಗಿ ಹೊಸ ಜೀವನ ಪ್ರಾರಂಭಿಸಲು ಬಯಸಿದ್ದ. ಇದಕ್ಕಾಗಿ ಆತ ಇನ್ನೊಬ್ಬ ವ್ಯಕ್ತಿಯನ್ನು ಕೊಂದು ಆತನ ಮುಖಕ್ಕೆ ಆಸಿಡ್ ಎರಚಿ ಆತನ ಆಧಾರ್ ಕಾರ್ಡ್ ನ್ನು ಮೃತ ವ್ಯಕ್ತಿಯ ಕಿಸೆಯಲ್ಲಿಟ್ಟಿದ್ದಾನೆ.
ವರದಿಯ ಪ್ರಕಾರ, ಕುಮಾರ್ ಅವರು ಬುಲಂದ್ಶಹರ್ನ ಮದ್ಯದಂಗಡಿಯೊಂದರಲ್ಲಿ ಮದ್ಯಪಾನಿಯೊಬ್ಬರನ್ನು ಹಣ ಮತ್ತು ಬಟ್ಟೆಗಳನ್ನು ಕೊಡುವುದಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ಬಳಿಕ ಕುಮಾರ್, ತನ್ನ ಹೆಂಡತಿ ಮತ್ತು ಸಹಚರನ ಸಹಾಯದಿಂದ ಆ ವ್ಯಕ್ತಿಯನ್ನು ಬುಲಂದ್ಶಹರ್ನ ಚತಾರಿ ಪ್ರದೇಶದ ಬಳಿಯ ಅರಣ್ಯಕ್ಕೆ ಕರೆದೊಯ್ದು ಕೊಂದು ಹಾಕಿದ್ದಾನೆ ಮತ್ತು ಮುಖವನ್ನು ವಿರೂಪಗೊಳಿಸಿದ್ದಾನೆ.
ಸೆ.23ರ ರಾತ್ರಿ, ರಾಜ್ ಕುಮಾರ್ ಹೆಸರನ್ನು ಹೊಂದಿರುವ ಶವ ಮತ್ತು ಆಧಾರ್ ಕಾರ್ಡ್ ನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ವಿರೂಪಗೊಂಡ ಮುಖವು ಅವರನ್ನು ಗೊಂದಲಕ್ಕೀಡು ಮಾಡಿತು ಮತ್ತು ಅವರು ಸ್ವಲ್ಪ ಹೆಚ್ಚು ತನಿಖೆ ನಡೆಸಿದರು.
ನಮ್ಮ ತನಿಖಾ ತಂಡವು ಕುಮಾರ್ ಅವರ ಹೆಂಡತಿಯ ಹೇಳಿಕೆಯನ್ನು ದಾಖಲಿಸಿದ ನಂತರ ಅವರ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ತನಿಖೆ ನಡೆಸಿದ್ದೇವೆ ಈ ವೇಳೆ ಅಲಿಗಢದ ವ್ಯಕ್ತಿಯೊಬ್ಬರಲ್ಲಿ ಮೊಬೈಲ್ ಇರುವುದು ಪತ್ತೆಯಾಗಿದೆ. ಕೊಲೆಯಾದ ಕೆಲವೇ ಗಂಟೆಗಳ ನಂತರ ಸೆ.24 ರಂದು ಫೋನ್ ತನಗೆ ಮಾರಾಟವಾಗಿದೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ನಾವು ಅವನಿಗೆ ಆಧಾರ್ ಕಾರ್ಡ್ ತೋರಿಸಿದಾಗ, ರಾಜ್ ಕುಮಾರ್ ಅವರು ಮಾರಾಟಗಾರ ಎಂದು ಗುರುತಿಸಿದ್ದಾರೆ ಎಂದು ಬುಲಂದ್ಶಹರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಹೇಳಿದ್ದಾರೆ.