ಕಲ್ಕತ್ತ(18/11/2020): ನೇತಾಜಿ ಶುಭಾಸ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆಗೆ ಸಂಬಂಧಿಸಿದ ಮಾಹಿತಿ ಕೇಂದ್ರ ಸರಕಾರಕ್ಕೆ ತಿಳಿದಿದೆ. ಅದನ್ನು ಜನರ ಮುಂದಿಡಬೇಕೆಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಇದೇ ವೇಳೆ ಅವರು ನೇತಾಜಿಯವರ ಜನ್ಮದಿನವಾದ ಜನವರಿ 23 ಅನ್ನು ರಾಷ್ಟ್ರೀಯ ರಜಾ ದಿನವಾಗಿ ಘೋಷಿಸಬೇಕೆಂದು ಅವರು ಪ್ರಧಾನ ಮಂತ್ರಿಯವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.
‘ನೇತಾಜಿಯ ನಿಗೂಢ ನಾಪತ್ತೆಗೆ ಸಂಬಂಧಿಸಿದ ವಿವರಗಳು ನಿಮಗೆ ತಿಳಿದಿದೆ. ಈ ವಿಷಯದಲ್ಲಿ ಸತ್ಯವೇನೆಂದು ತಿಳಿಯುವ ಹಕ್ಕು ದೇಶದ ಜನತೆಗೆ ವಿಶೇಷವಾಗಿ ಪಶ್ಚಿಮ ಬಂಗಾಳದ ಜನತೆಗಿದೆ. ನೇತಾಜಿಗೆ ಸಂಬಂಧಿಸಿದ ಅನೇಕ ಕಡತಗಳು ಕೇಂದ್ರ ಸರಕಾರದ ಬಳಿಯಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.