ಮಂಗಳೂರು (18-02-2021): ಮಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಎಸ್ ಡಿಪಿಐ ಅಭ್ಯರ್ಥಿ ಇಸ್ಮಾಯಿಲ್ ಎಂ.ಇ. ಮತ್ತು ಉಪಾಧ್ಯಕ್ಷೆಯಾಗಿ ಪ್ರೇಮಾ ಅವರು ಆಯ್ಕೆಯಾಗಿದ್ದಾರೆ.
ಮಲ್ಲೂರು ಗ್ರಾಮ ಪಂಚಾಯತ್ ನಲ್ಲಿ 9 ಸದಸ್ಯ ಬಲವಿದ್ದು, ಅದರಲ್ಲಿ ಬಹುಮತಕ್ಕೆ 5 ಸ್ಥಾನಗಳ ಅಗತ್ಯವಿತ್ತು. ಎಸ್ ಡಿಪಿಐ ಬೆಂಬಲಿತರು 5, ಕಾಂಗ್ರೆಸ್ ಬೆಂಬಲಿತರು 3 ಮತ್ತು ಬಿಜೆಪಿ ಬೆಂಬಲಿತರು 1 ಸ್ಥಾನಗಳಲ್ಲಿ ಗೆದ್ದಿದ್ದರು.
ಎಸ್ ಡಿಪಿಐ ಬೆಂಬಲಿತರು ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳನ್ನು ಪಡೆದಿದ್ದರು. ಇದರಿಂದಾಗಿ ಕಾಂಗ್ರೆಸ್ , ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ.