ದಾವಣಗೆರೆ (16-11-2020): ಮಲೆಬೆನ್ನೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಹಸು ಹಾಗೂ ಅಡಿಕೆ ಕಳ್ಳರನ್ನು ಬಂಧಿಸಿದ್ದಾರೆ.
ಹಸು ಹಾಗೂ ಅಡಿಕೆ ಕಳ್ಳತನ ಪ್ರಕರಣದಲ್ಲಿ 6 ಜನ ಕಳ್ಳರನ್ನು ಬಂಧಿಸಿ ಬಂಧಿತರಿಂದ ಹಸು, ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ಬುಲೆರೋ ವಾಹನ ಸೇರಿ ಸುಮಾರು 6.44 ಲಕ್ಷ ಮೌಲ್ಯದ ಮಾಲನ್ನು ಮಲೆಬೆನ್ನೂರು ಪೋಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ನಂದಿತಾವರೆ ಗ್ರಾಮದ ಬಿಪಿ ಬಸವಲಿಂಗಪ್ಪ ಮಲೆಬೆನ್ನೂರು ಪೊಲೀಸ್ ಠಾಣೆಗೆ ಹಾಜರಾಗಿ ಅಡಿಕೆ ಕಳ್ಳತನವಾಗಿರುವ ಬಗ್ಗೆ ಬುಧವಾರದಂದು ದೂರನ್ನು ನೀಡಿದ್ದರು. ದೂರು ದಾಖಲಿಸಿಕೊಂಡ ಪೋಲೀಸರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಹನುಮಂತರಾಯ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಎಂ ರಾಜೀವ್ ರವರುಗಳ ಮಾರ್ಗದರ್ಶನದಲ್ಲಿ , ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ ತಾಮ್ರಧ್ವಜ, ಹರಿಹರ ವೃತ್ತ ನಿರೀಕ್ಷಕರಾದ ಶಿವಪ್ರಸಾದ್ ನೇತೃತ್ವದಲ್ಲಿ ಮಲೆಬೆನ್ನೂರು ಪಿಎಸ್ಐ ವೀರಬಸಪ್ಪ ಕುಸಲಾಪುರ್ ರವರ ವಿಶೇಷ ತಂಡವು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಾಸಾಬ್ ಮಾಸೂರು, ರಾಜ ಮೋಹಮದ್,.ಅಬ್ದುಲ್ , ಸಲೀಂ ರಫೀಕ್ ,ಶೌಕತ್ ಆಲಿ ಬಂಧಿತರು.
ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಎಎಸ್ಐ ಯಾಸೀನ್ ಉಲ್ಲಾ, ಶಿವಕುಮಾರ್ ಕೆ, ಲಕ್ಷ್ಮಣ್ ಆರ್ , ರಾಜಶೇಖರ್, ಬಸವರಾಜ್ ಟಿ, ಮೂರ್ತಿ, ಸಂತೋಷ್ ಕುಮಾರ್, ದ್ವಾರಕೀಶ್ , ನಾಗಪ್ಪ ಕಡೆಮನಿ, ರವಿ, ವೆಂಕಟೇಶ್ ಇದ್ದರು.
-ಕೋಗಲೂರು ಕುಮಾರ್