ಅನಾಹುತ ಮಾಡಿಕೊಂಡ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ| ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ

CRIME NEWS
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಡ್ಯ (01-12-2020): ಮೇಲುಕೋಟೆ ಬಳಿ ಹೃದಯವಿದ್ರಾಹಕ ಘಟನೆ ನಡೆದಿದ್ದು, ಇಬ್ಬರು ಮಕ್ಕಳಿಗೆ ನೇಣು ಹಾಕಿ ತಾಯಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

 ಕುಪ್ಪಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ನಿವೇದಿತಾ(26), ಮಕ್ಕಳಾದ ಗಾನವಿ(6) ಹಾಗೂ ಉಲ್ಲಾಸ್ (4) ಮೃತರು.

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನಿವೇದಿತಾ ಮೊದಲು ಮಕ್ಕಳಿಗೆ ನೇಣಿಗೆ ಹಾಕಿ ಬಳಿಕ ಅವರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ.

ನಿವೇದಿತಾ ಅವರನ್ನು 7 ವರ್ಷಗಳ ಹಿಂದೆ ಕುಪ್ಪಳ್ಳಿ ಗ್ರಾಮದ ಕೃಷ್ಣೇಗೌಡ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಘಟನೆಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಈ ಕುರಿತು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು