ಮಕ್ಕಳ ಭವಿಷ್ಯದ ಜೊತೆ ಆಟವಾಡುವುದು ನಿಲ್ಲಿಸಿ ಸ್ವಾಮಿ: ಶಿಕ್ಷಣ ಸಚಿವರಿಗೆ ಕಾಂಗ್ರೆಸ್ ಒತ್ತಾಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಶಿಕ್ಷಣ ಸಚಿವ ಸುರೇಶಕುಮಾರ್ ಅವರೇ, ಮಕ್ಕಳ, ಜೀವ ಹಾಗೂ ಭವಿಷ್ಯದ ಜೊತೆ ಆಟವಾಡುವುದನ್ನ ನಿಲ್ಲಿಸಿ, ನಿಮ್ಮ ಅಜ್ಞಾನಕ್ಕೆ, ದೂರದೃಷ್ಟಿಯ ಕೊರತೆಗೆ ಯುವ ಪೀಳಿಗೆಯನ್ನು ಬಲಿ ಕೊಡಬೇಡಿ. ಸೋಂಕು ಉಲ್ಬಣಿಸಿರುವ ವೇಳೆ ಸ್ಪಷ್ಟ ನಿರ್ಧಾರ ಕೈಗೊಳ್ಳಿ ಸ್ವಾಮಿ ಎಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ.

ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್ ಶಿಕ್ಷಣ ಸಚಿವರ ಗೊಂದಲದ ನಿರ್ಧಾರಗಳನ್ನು ಖಂಡಿಸಿದ ಕಾಂಗ್ರೆಸ್, ಅಡ್ಡ ಗೋಡೆ ಮೇಲೆ ದೀಪ ಇಡುವುದನ್ನು ಬಿಟ್ಟು ಯುವಪೀಳಿಗೆಗೆ ದಾರಿದೀಪವಾಗುವ ಕೆಲಸ ಮಾಡಿ.
ಇನ್ನೂ ಸಮಯವಿದೆ, ಇನ್ನೂ ಕಾಲವಿದೆ ಎನ್ನುವ ಬೇಜವಾಬ್ದಾರಿ ಹೇಳಿಕೆ ಬಿಟ್ಟು ವಿದ್ಯಾರ್ಥಿಗಳಿಗೆ ಸ್ಪಷ್ಟತೆ ಕೊಡಿ ಎಂದು ಆರೋಪಿಸಿದೆ.

ನಿಮ್ಮ ಸೋಂಕಿತಸರ್ಕಾರ ಕರೋನಾವನ್ನು ನಿಯಂತ್ರಣಕ್ಕೆ ತರುವ ಯಾವುದೇ ಲಕ್ಷಣವಿಲ್ಲ, ಮುಂದೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.
ಇದೆಲ್ಲವನ್ನೂ ಗಮನಿಸಿದರೆ ಪರೀಕ್ಷೆ ಮುಂದೂಡುವುದು ಅನಿವಾರ್ಯವಾಗಲಿದೆ,

ಕರೋನಾ, ಲಾಕ್ಡೌನ್ , ಬಗೆಹರಿಯದ ಶಾಲಾ ಶುಲ್ಕ ವಿವಾದ, ಯಶಸ್ವಿಯಾಗದ ವಿದ್ಯಾಗಮ, ಹಿಂದುಳಿದ ಕಲಿಕಾ ಪ್ರಗತಿ, ಪೂರ್ಣಗೊಳ್ಳದ ಪಾಠಗಳು, ಶಿಕ್ಷಣದಿಂದ ಹೊರಗುಳಿದ ವಿದ್ಯಾರ್ಥಿಗಳು, ಆನ್ಲೈನ್ ತರಗತಿಗಳ ವೈಫಲ್ಯ ಇವೆಲ್ಲವುಗಳ ನಡುವೆ ವಿದ್ಯಾರ್ಥಿಗಳ ಭವಿಷ್ಯ ಮಂಕಾಗಿದೆ. ಪರೀಕ್ಷೆಗಳ ಮೊದಲು ಈ ಎಲ್ಲಾ ವಿಚಾರಗಳಲ್ಲಿ ಲೋಪ ಸರಿಪಡಿಸಿ ಎಂದು ಸಚಿವ ಸುರೇಶ್ ಕುಮಾರ್ ಅವರಿಗೆ ಕಾಂಗ್ರೆಸ್ ಆಗ್ರಹಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು