ನವದೆಹಲಿ(10-02-2021): 2020 ರ ಪ್ರಮುಖ ಬಂದರು ಪ್ರಾಧಿಕಾರದ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ.
ಮಸೂದೆ ಪರ 84 ಮತದಾನ ಮತ್ತು 44 ಮಸೂದೆ ವಿರುದ್ಧ ಮತದಾನವಾಗಿತ್ತು. ರಾಜ್ಯಸಭೆಯಲ್ಲಿ ಇಂದು ಮಸೂದೆ ಅಂಗೀಕರಿಸಲ್ಪಟ್ಟಿದೆ. ಲೋಕಸಭೆಯಲ್ಲಿ ಸೆಪ್ಟೆಂಬರ್ 23, 2020 ರಂದು ಮಸೂದೆಯನ್ನು ಅಂಗೀಕರಿಸಲಾಗಿತ್ತು.
ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ಬಗ್ಗೆ ಮಾಹಿತಿ ನೀಡಿ, ಪ್ರಮುಖ ಬಂದರುಗಳ ಖಾಸಗೀಕರಣದ ಉದ್ದೇಶವನ್ನು ಹೊಂದಿಲ್ಲ ಮತ್ತು ಖಾಸಗಿ ಬಂದರುಗಳೊಂದಿಗೆ ಸ್ಪರ್ಧಿಸುವ ಸಲುವಾಗಿ ತಮ್ಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಭಾರತದ ಪ್ರಮುಖ ಬಂದರುಗಳ ನಿಯಂತ್ರಣ, ಕಾರ್ಯಾಚರಣೆ ಮತ್ತು ಯೋಜನೆಯನ್ನು ಒದಗಿಸುವುದು ಮತ್ತು ಬಂದರುಗಳ ಆಡಳಿತ, ನಿಯಂತ್ರಣ ಮತ್ತು ನಿರ್ವಹಣೆಯನ್ನು ಪ್ರಮುಖ ಬಂದರು ಅಧಿಕಾರಿಗಳ ಮಂಡಳಿಗಳ ಮೇಲೆ ವಹಿಸುವುದು ಮಸೂದೆಯಲ್ಲಿ ಸೂಚಿಸುತ್ತದೆ ಎನ್ನಲಾಗಿದೆ.