ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಜನಾದೇಶ ಮಾರಿಕೊಂಡವರು : ಸಿದ್ದರಾಮಯ್ಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ರಾಯಚೂರು(ಮಸ್ಕಿ): ನನ್ನ ಅಧಿಕಾರಾವಧಿಯಲ್ಲಿ ಮಸ್ಕಿ ಒಂದೇ ಕ್ಷೇತ್ರಕ್ಕೆ ₹5000 ಕೋಟಿ ಅನುದಾನ ಕೊಟ್ಟಿದ್ದು, ನಂದವಾಡಗಿ ಏತ ನೀರಾವರಿಗೆ ₹3000 ಕೋಟಿ ಕೊಟಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಸ್ಕಿ ವಿಧಾನಸಭಾ ಉಪಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಮಾತನಾಡಿದ ಅವರು ಮಸ್ಕಿ ಕ್ಷೇತ್ರದ ರಸ್ತೆ, ನೀರಾವರಿ, ಶಾಲಾ ಕಟ್ಟಡ ಹಾಗೂ ಪದವಿ ಕಾಲೇಜಿಗಾಗಿ ಒಂದು ಎಕರೆ ಜಮೀನು ಕೊಡಿಸಿ ಕಾಲೇಜು ಮಂಜೂರು ಮಾಡಿಸಿದ್ದು ನಮ್ಮ ಸರ್ಕಾರ, ಈ ಕ್ಷೇತ್ರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಖರ್ಚು ನೀಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಇಷ್ಟೆಲ್ಲಾ ಮಾಡಿದ ಮೇಲೆ ನಮ್ಮ ಸರ್ಕಾರದ ಅವಧಿ ಮುಗಿತು, ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಮಾಡಿದರೂ ಪ್ರತಾಪ್ ಗೌಡ ಪಾಟೀಲ್ ಬಿಜೆಪಿಗೆ ಹೋಗಿದ್ದಾರೆ. ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಬಿಜೆಪಿ ಸೇರುವ ಮೊದಲು ಸ್ಥಳೀಯ ಮುಖಂಡರನ್ನಾಗಲಿ, ಅನುದಾನ ಕೊಟ್ಟ ನನ್ನನ್ನಾಗಲಿ, ನಮ್ಮ ಪಕ್ಷವನ್ನಾಗಲಿ ಕೇಳಲಿಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು. ಕ್ಷೇತ್ರದ ಮತದಾರರ ಒಪ್ಪಿಗೆಯನ್ನೂ ಪಡೆಯದೇ, ಮಾರಾಟವಾಗಿ ಬಿಜೆಪಿಗೆ ಹೋಗಿದ್ದಾರೆ. ಅಂತರವನ್ನು ಗೆಲ್ಲಿಸಬೇಕೆ? ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ತಿಂಗಳು 17ರಂದು ಉಪಚುನಾವಣೆಗೆ ಮತದಾನ ನಡೆಯಲಿದೆ. ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯ ಪ್ರತಾಪ ಗೌಡರು ಈ ಹಿಂದೆ ಕಾಂಗ್ರೆಸ್ ಶಾಸಕರಾಗಿದ್ದರು. ಅನಂತರ ಬಿಜೆಪಿ ಸೇರಿ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರುವಿಹಾಳ ಈ ಹಿಂದೆ ಬಿಜೆಪಿಯಲ್ಲಿದ್ದರು. ಅಭ್ಯರ್ಥಿಗಳು ಅವರೇ ಆದರೆ ಅಭ್ಯರ್ಥಿಗಳು ಪಕ್ಷ ಬದಲಾಯಿಸಿದ್ದಾರೆ. ಜನ ಯಾರಿಗೆ ಗೆಲ್ಲಿಸಿತ್ತಾರೆ ಎಂಬುದು ತುಂಬಾ ಕುತೂಹಲ ಮೂಡಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು