ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹಾಗೂ ಪತ್ನಿ ಚೆನ್ನಮ್ಮಗೆ  ಕೋವಿಡ್ ದೃಢ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಮಾಜಿ ಪ್ರಧಾನಿ ಎಚ್. ಡಿ.ದೇವೆಗೌಡ ಹಾಗೂ ಅವರ ಧರ್ಮಪತ್ನಿ ಚೆನ್ನಮ್ಮ ಅವರಿಗೆ ಕೋವಿಡ್ 19 ದೃಢಪಟ್ಟಿದೆ.

“ನನಗೆ ಹಾಗೂ ಹೆಂಡತಿ ಚೆನ್ನಮ್ಮ ಅವರಿಗೆ COVID-19 ದೃಢಪಟ್ಟಿದೆ. ನಾವು ನಮ್ಮ ಕುಟುಂಬ ಸದಸ್ಯರೊಂದಿಗೆ ಸ್ವಯಂ-ಪ್ರತ್ಯೇಕಿಸುತ್ತಿದ್ದೇವೆ. ಕಳೆದ ಕೆಲವು ದಿನಗಳಿಂದ ನಮ್ಮೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ.
ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳು ಭಯಭೀತಿಗೆ ಒಳಗಾಗಬೇಡಿ” ಎಂದು ದೇವೆಗೌಡರು ಟ್ವೀಟ್ ಮೂಲಕ ವಿನಂತಿಸಿದ್ದಾರೆ.

ಸ್ವಲ್ಪ ದಿನಗಳಿಂದ ದೇವೆಗೌಡರಿಗೆ ಶೀತ ಜ್ವರ ಕಾಣಿಸಿತ್ತು, ಬುಧವಾರ ಕೋವಿಡ್ ಟೆಸ್ಟ್ ಮಾಡಿಸಿದಾಗ ಇಬ್ಬರಿಗೂ ಪಾಸಿಟಿವ್ ವರದಿ ಬಂದಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ವೈದ್ಯರ ಸಲಹೆಯಂತೆ ದೇವೆಗೌಡರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಪತ್ನಿ ಚೆನ್ನಮ್ಮರಿಗೆ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ.

ಈ ಸಂಬಂಧವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇವೆಗೌಡರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ, ಭಾರತದ ಯಾವುದೇ ನಗರದ ಆಸ್ಪತ್ರೆಯಲ್ಲಿ ನಿಮಗೆ ಚಿಕಿತ್ಸೆ ಕೊಡಿಸಲು ನಾನು ಎಲ್ಲಾ ರೀತಿಯ ನೆರವು ನೀಡುವೆ, ಭಯ ಪಡಬೇಡಿ, ಬೇಗ ಗುಣಮುಖರಾಗಿ ಎಂದು ಮೋದಿ ಅವರು ಯೋಗಕ್ಷೇಮ ವಿಚಾರಿಸಿದ್ದಾರೆ. ಜೊತೆಗೆ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ದೇವೆಗೌಡ ದಂಪತಿಗಳು ಆದಷ್ಟು ಬೇಗ ಕೊರೋನಾ ದಿಂದ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು