ಮುಂಬೈ :ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದ್ದು,ಕ್ರಿಕೆಟ್ ದೇವರು ಎಂದು ಪ್ರಖ್ಯಾತಿ ಪಡೆದ ಮಾಜಿ ಭಾರತ ತಂಡದ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಗೆ ಕೊರೋನಾ ಪೊಸಿಟಿವ್ ಕಂಡು ಬಂದಿದೆ.
ಕೊರೋನಾ ವೈರಸ್ ಲಕ್ಷಣ ಕಂಡಿದ್ದು,ಪರೀಕ್ಷೆ ಮಾಡಿಸಿದಾಗ ಕೊರೋನಾ ಪೊಸಿಟಿವ್ ಕಂಡುಬಂದಿದೆ. ಸದ್ಯ ಮನೆಯಲ್ಲೇ ಇದ್ದು ಕ್ವಾರಂಟೈನ್ ಗೆ ಒಳಗಾಗಿದ್ದೇನೆ.ವೈದ್ಯಕೀಯ ಸಲಹೆಗಳನ್ನು ಪಾಲಿಸುತ್ತಿದ್ದೇನೆ.ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸಚಿನ್ ತೆಂಡುಲ್ಕರ್ ರವರ ಮನೆಯಲ್ಲಿರುವ ಕುಟುಂಬದವರಿಗೆ ನೆಗೆಟಿವ್ ರಿಪೋರ್ಟ್ ಬಂದಿದ್ದು,ಕ್ಷೇಮದಲ್ಲಿದ್ದಾರೆ ಎಂದು ತಿಳಿದು ಬಂದಿದೆ.