ನವದೆಹಲಿ(02-01-2021): ಮಹಾತ್ಮ ಗಾಂಧಿಯವರಿಗೆ ದೇಶಭಕ್ತಿ ಮತ್ತು ಹಿಂದೂ ಧರ್ಮ ಪರಸ್ಪರ ಪ್ರತ್ಯೇಕವಾಗಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸುತ್ತಿರುವ ಆರೆಸ್ಸೆಸ್ಸಿಗರು ಮತ್ತೆ ಗಾಂಧೀಜಿಯನ್ನು ಅಪ್ಪಿಕೊಳ್ಳಲು ಮುಂದಾಗಿದ್ದಾರೆ.
ಜೆ.ಕೆ.ಬಜಾಜ್ ಮತ್ತು ಎಂಡಿ ಶ್ರೀನಿವಾಸ್ ಅವರ ಮೇಕಿಂಗ್ ಆಫ್ ಎ ಹಿಂದೂ ಪೇಟ್ರಿಯಾಟ್ ಪುಸ್ತಕ ಬಿಡುಗಡೆಯಲ್ಲಿ ಮಾತನಾಡಿದ ಮೋಹನ್ ಭಾಗವತ್, ಗಾಂಧೀಜಿಯ ಹಿಂದ್ ಸ್ವರಾಜ್ ಹಿನ್ನೆಲೆ ಸಂದರ್ಭದಲ್ಲಿ ರಾಜ್ಘಾಟ್ನಲ್ಲಿ ನನ್ನ ದೇಶಪ್ರೇಮ ನನ್ನ ಧರ್ಮದಿಂದ ಬಂದಿದೆ ಎಂದು ಗಾಂಧಿ ಜಿ ಹೇಳಿದ್ದಾರೆ. ನೀವು ಹಿಂದೂ ಆಗಿದ್ದರೆ, ನೀವು ದೇಶಭಕ್ತರಾಗಿರುವುದು ಸಹಜ.
ಪುಸ್ತಕದಲ್ಲಿ, ಲೇಖಕರು ಗಾಂಧಿಯವರು ಲಿಯೋ ಟಾಲ್ಸ್ಟಾಯ್ಗೆ ಬರೆದಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ನನ್ನ ದೇಶಪ್ರೇಮವು ಸಾಕಷ್ಟು ಪೇಟೆಂಟ್ ಆಗಿದೆ, ಭಾರತದ ಬಗ್ಗೆ ನನ್ನ ಪ್ರೀತಿ ಎಂದೆಂದಿಗೂ ಬೆಳೆಯುತ್ತಿದೆ ಅದು ನನ್ನ ಧರ್ಮದಿಂದ ಹುಟ್ಟಿಕೊಂಡಿದೆ ಎಂದು ಹೇಳಿದ್ದಾರೆ.
ಏಕತೆಯ ಅಸ್ತಿತ್ವವನ್ನು ಹಿಂದೂ ಧರ್ಮ ನಂಬುತ್ತದೆ ಎಂದು ಭಾಗವತ್ ಒತ್ತಿ ಹೇಳಿದರು. ವ್ಯತ್ಯಾಸವು ಪ್ರತ್ಯೇಕತಾವಾದದ ಅರ್ಥವಲ್ಲ ಗಾಂಧಿಯವರು ತಮ್ಮ ಧರ್ಮವು ಇತರ ಎಲ್ಲ ಧರ್ಮಗಳನ್ನು ಕರೆದೊಯ್ಯುತ್ತದೆ ಎಂದು ಹೇಳಿದ್ದಾರೆ ಎಂದು ಭಾಗವತ್ ಉಲ್ಲೇಖಿಸಿದ್ದಾರೆ.
ಬಿಜೆಪಿಯ ವಿವಾದಾತ್ಮ,ಕ ಸಂಸದೆ ಸಾದ್ವಿ ಪ್ರಾಗ್ಯಾ ಸಂಸತ್ತಿನಲ್ಲಿ ಮಹಾತ್ಮಾ ಗಾಂಧೀಜಿಯನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಬಿಂಬಿಸಿದ್ದರು. ಈ ಬಗ್ಗೆ ಆರೆಸ್ಸೆಸ್ ಮೌನವಾಗಿತ್ತು. ಬಲಪಂಥೀಯರ ನಿಲುವು ಕೂಡ ಗೋಡ್ಸೆ ಪರವಾಗಿಯೇ ಚರ್ಚೆಗೆ ಬಂದಿತ್ತು.