ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ: ಪಾರುಪತ್ಯ ಮೆರೆದ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ತೀವ್ರ ಮುಖಭಂಗ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯದ ವಿವಿಧೆಡೆ ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯತ್ ಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಸ್ಪಷ್ಟ ಬಹುಮತದೊಂದಿಗೆ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಪಾರುಪತ್ಯ ಮೆರೆದಿದೆ.

ಬಳ್ಳಾರಿ ಮಹಾನಗರ ಪಾಲಿಕೆ
ಬಿಜೆಪಿ ಪಕ್ಷ ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ತೀವ್ರ ಮುಖಭಂಗಕ್ಕೊಳಗಾಗಿದ್ದು, ಒಟ್ಟು 39 ವಾರ್ಡ್ ಗಳ ಪೈಕಿ 21 ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಅಧಿಕಾರದತ್ತ ದಾಪುಗಾಲಿಟ್ಟಿದೆ. ಅಲ್ಲಿ ಬಿಜೆಪಿಗೆ ಕೇವಲ 13 ಸ್ಥಾನಗಳು ಹಾಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ವಂಚಿತರಾಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಐವರು ಜಯಗಳಿಸಿದ್ದಾರೆ‌.

ಬೀದರ್ ನಗರಸಭೆ
ಬೀದರ್ ನಗರಸಭೆಯ 32 ಸ್ಥಾನಗಳಿಗೆ ‌ನಡೆದ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಅಲ್ಲಿ ಬಿಜೆಪಿಗೆ 8, ಜೆಡಿಎಸ್ ಗೆ 7, ಎಐಎಂಐಎಂ ಗೆ 2 ಹಾಗೂ ಆಮ್ ಆದ್ಮಿ ಪಕ್ಷಕ್ಕೆ 1 ಸ್ಥಾನ ದಕ್ಕಿದೆ.

ಭದ್ರಾವತಿ ನಗರಸಭೆ
ಭದ್ರಾವತಿ ನಗರಸಭೆ ಕಾಂಗ್ರೆಸ್ ತೆಕ್ಕೆಗೆ.
ಒಟ್ಟು 35 ಸ್ಥಾನಗಳ ಪೈಕಿ ಕಾಂಗ್ರೆಸ್ 18 ರಲ್ಲಿ, ಬಿಜೆಪಿ 04 ರಲ್ಲಿ ಜೆಡಿಎಸ್ 11 ರಲ್ಲಿ ಹಾಗೂ ಪಕ್ಷತೇರ-1 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ರಾಮನಗರ ನಗರಸಭೆ
ಬಿಜೆಪಿಯ ಶೂನ್ಯ ಸಾಧನೆ.
ಒಟ್ಟು 31 ಸ್ಥಾನಗಳ ಪೈಕಿ ಕಾಂಗ್ರೆಸ್ 19 ರಲ್ಲಿ, ಬಿಜೆಪಿ 00, ಜೆಡಿಎಸ್ 11, ಪಕ್ಷೇತರ 01 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಬೇಲೂರು ಪುರಸಭೆ
ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್ 17 ರಲ್ಲಿ, ಬಿಜೆಪಿ 01 ರಲ್ಲಿ ಹಾಗೂ ಜೆಡಿಎಸ್ ನ 05 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಗುಡಿಬಂಡೆ ಪಟ್ಟಣ ಪಂಚಾಯತ್
ಒಟ್ಟು 11 ಸ್ಥಾನಗಳ ಪೈಕಿ ಕಾಂಗ್ರೆಸ್ 06 ರಲ್ಲಿ, ಜೆಡಿಎಸ್ 02 ರಲ್ಲಿ ಹಾಗೂ ಪಕ್ಷೇತರ 03 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಇಲ್ಲೂ ಬಿಜೆಪಿ ಶೂನ್ಯ ಸಾಧನೆ.

ತೀರ್ಥಹಳ್ಳಿ ಪಟ್ಟಣ ಪಂಚಾಯತ್
ಬಿಜೆಪಿಯ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ, ಕಳೆದ 25 ವರ್ಷಗಳಿಂದ ಬಿಜೆಪಿ ಆಡಳಿತದಲ್ಲಿದ್ದ ತೀರ್ಥಹಳ್ಳಿ ಪಂಚಾಯತನ್ನು ಕಾಂಗ್ರೆಸ್ ವಶಪಡಿಸಿಕೊಂಡಿದೆ.
ಒಟ್ಟು 15 ಸ್ಥಾನಗಳ ಪೈಕಿ ಕಾಂಗ್ರೆಸ್ ರಲ್ಲಿ, ಬಿಜೆಪಿಯ 06 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ವಿಜಯಪುರ ಪುರಸಭೆ
ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್ 06 ರಲ್ಲಿ, ಬಿಜೆಪಿ 01 ರಲ್ಲಿ, ಜೆಡಿಎಸ್ 14 ರಲ್ಲಿ ಹಾಗೂ ಪಕ್ಷೇತರ ಎರಡು ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಇಲ್ಲಿ ಜೆಡಿಎಸ್ ಪಕ್ಷ ಸ್ಪಷ್ಟ ಬಹುಮತ ಪಡೆದುಕೊಂಡಿದೆ.

ಚನ್ನಪಟ್ಟಣ ನಗರಸಭೆ
ಒಟ್ಟು ಸ್ಥಾನಗಳ 31 ಪೈಕಿ ಕಾಂಗ್ರೆಸ್ 07 ರಲ್ಲಿ, ಬಿಜೆಪಿ 07 ರಲ್ಲಿ, ಜೆಡಿಎಸ್ 16 ರಲ್ಲಿ ಹಾಗೂ ಪಕ್ಷೇತರ 01 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಇಲ್ಲೂ ಜೆಡೆಎಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದತ್ತ ದಾಪುಗಾಲಿಟ್ಟಿದೆ.

ಮಡಿಕೇರಿ ನಗರಸಭೆ
ತೀವ್ರ ಪೈಪೋಟಿಯ ನಡುವೆ ಮಡಿಕೇರಿ ನಗರಸಭೆ ಬಿಜೆಪಿ ಪಕ್ಷದ ಪಾಲಾಗಿದೆ.
ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್ 01 ರಲ್ಲಿ, ಬಿಜೆಪಿ 16 ರಲ್ಲಿ, ಜೆಡಿಎಸ್ 01 ರಲ್ಲಿ ಹಾಗೂ ಎಸ್ಡಿಪಿಐ ನ 05 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಒಟ್ಟಾರೆಯಾಗಿ ರಾಜ್ಯದ ವಿವಿಧೆಡೆ ಒಟ್ಟು 266 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬರೋಬ್ಬರಿ 119 ಸ್ಥಾನಗಳಲ್ಲಿ ಜಯಗಳಿಸಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.
ಉಳಿದಂತೆ ಜೆಡಿಎಸ್ 67 ಸ್ಥಾನಗಳಲ್ಲಿ ಹಾಗೂ ಬಿಜೆಪಿ 56 ಸ್ಥಾನಗಳಲ್ಲಿ ಜಯಗಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು