ಬಿಹಾರ ಚುನಾವಣೆ; ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಬಹುಮತ? ಸಮೀಕ್ಷೆ ಏನು ಹೇಳುತ್ತದೆ?

Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಾಟ್ನಾ(07/11/2020);   ಮೂರನೇ ಮತ್ತು ಕೊನೆಯ ಹಂತದ  ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಇಂದು ಪೂರ್ಣಗೊಂಡಿದೆ.

ಈ ನಡುವೆ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶಗಳು ಪ್ರಕಟಗೊಂಡಿದ್ದು,  ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಪಕ್ಷಗಳಿಗೆ ಸ್ಪಷ್ಟ ಬಹುಮತ ಲಭಿಸಲಿವೆ ಎಂದು  ತಿಳಿಸಿವೆ.

ಆರ್‌ಜೆಡಿ ಮತ್ತು ಎಡ ಪಕ್ಷಗಳು ಒಟ್ಟು 124 ಸ್ಥಾನಗಳಲ್ಲಿ ಗೆಲ್ಲಲಿದ್ದು, ಎನ್‌ಡಿಎ ಮತ್ತು ನಿತೀಶ್‌ಕುಮಾರ್ ಅವರ ಪಕ್ಷ 110 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಬಹತೇಕ ಎಲ್ಲಾ ಸಮೀಕ್ಷೆಗಳೂ ಹೇಳಿವೆ.

ಟೈಮ್ ನೌ-ಸಿ ಸಮೀಕ್ಷೆ ಪ್ರಕಾರ, ಎನ್‌ಡಿಎಗೆ 116 ಮತ್ತು ಪ್ರತಿಪಕ್ಷದ ಮಹಾಘಟಬಂಧನ್‌ಗೆ 120 ಸ್ಥಾನಗಳಲ್ಲಿ ಗೆಲುವಿನ ಭರವಸೆ ನೀಡಿದ್ದು, ತೇಜಸ್ವಿ ಯಾದವ್ ಮೈತ್ರಿಪಕ್ಷಕ್ಕೆ ಸ್ವಲ್ಪ ಮುನ್ನಡೆ ನೀಡಿದೆ. ಚಿರಾಗ್ ಪಾಸ್ವಾನ್‌ರ ಲೋಕ ತಾಂತ್ರಿಕ್ ಜನಶಕ್ತಿ ಪಕ್ಷಕ್ಕೆ (ಎಲ್‌ಜೆಪಿ) ಒಂದು ಸ್ಥಾನದಲ್ಲಿ ಗೆಲುವು ಸಿಗಲಿದೆ ಎಂದು ವರದಿ ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು