ಲಕ್ನೋ: ತನ್ನ 17 ವರ್ಷದ ಮಗಳು ಪ್ರೇಮಿಯ ಜೊತೆಗೆ ಇದ್ದಳು ಎಂಬ ಕಾರಣಕ್ಕೆ ತಂದೆ ಆಕೆಯ ರುಂಡವನ್ನೇ ಕತ್ತರಿಸಿದ ಘಟನೆ ಉತ್ತರಪ್ರದೇಶದ ಹರದೋಯಿ ಜಿಲ್ಲೆಯ ಮಾಜ್ ಹಿಲಾದಲ್ಲಿ ನಡೆದಿದೆ.
ಮಗಳ ರುಂಡವನ್ನು ಕತ್ತರಿಸಿ, ರುಂಡ ಸಹಿತ ಪೊಲೀಸ್ ಠಾಣೆಗೆ ಹೋಗಿದ್ದಾನೆ. ನಿನ್ನೆ ಸುಮಾರು 3 ಗಂಟೆಯ ವೇಳೆಗೆ ಮಗಳು ಪ್ರಿಯತಮನ ಜೊತೆಗೆ ಇರುವುದನ್ನು ಕಂಡು, ಆಕ್ರೋಶದಲ್ಲಿ ತಂದೆ ಈ ಕೆಲಸ ಮಾಡಿದ್ದಾನೆ.
ಮಗಳ ತಲೆ ಕತ್ತರಿಸಿ ಎರಡು ಕಿ.ಮೀ.ದೂರದ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಈತ ಕೈಯಲ್ಲಿ ಮಗಳ ರುಂಡ ಹಿಡಿದುಕೊಂಡು ಹೋಗುವುದನ್ನು ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.
ಮಗಳು ಪ್ರೀತಿಸುತ್ತಿರುವ ವಿಚಾರಕ್ಕೆ ತಿಳಿದು ತಾನು ಆಕೆಯನ್ನು ಕೊಂದಿರುವುದಾಗಿ ಪಾಪಿ ತಂದೆ ಪೊಲೀಸರ ಎದುರು ಹೇಳಿಕೆ ನೀಡಿದ್ದಾನೆ. ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳೆಲ್ಲ ಸರ್ವೇ ಸಾಮಾನ್ಯವಾಗಿ ನಡೆಯುತ್ತಲೇ ಇದೆ.