ಮಗಳ ಮೇಲಿನ ಅತ್ಯಾಚಾರಕ್ಕೆ ಪ್ರತಿಕಾರ | ಆರೋಪಿಯ ಕುಟುಂಬದ ಆರು ಜನರನ್ನು ಕೊಂದ ತಂದೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ವಿಶಾಖಪಟ್ಟಣ: ತನ್ನ ಮಗಳ ಮೇಲೆ ನಡೆದ ಅತ್ಯಾಚಾರಕ್ಕೆ ಉಗ್ರವಾಗಿ ಪ್ರತಿಕಾರ ತೀರಿಸಿದ ತಂದೆಯು, ಆರೋಪಿಯಕುಟುಂಬದ ಆರು ಜನರನ್ನು ಕೊಚ್ಚಿ ಕೊಲೆಗೈದಿದ್ದಾನೆ. ಕೊಲೆಯಾದವರಲ್ಲಿ ಇಬ್ಬರು ಎಳೆಯ ಪ್ರಾಯದ ಮಕ್ಕಳೂ ಸೇರಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಜುಟ್ಟದ ಎಂಬ ಹಳ್ಳಿಯಲ್ಲಿ ನಡೆದ ಘಟನೆಯು ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಆರು ತಿಂಗಳ ಕೂಸು ಉರ್ವಿಷ, ಎರಡು ವರ್ಷದ ಮಗು ಉದಯ ಕುಮಾರ್, ರಮಣ(60), ರಮಾದೇವಿ(53), ಅರುಣ(37), ಉಷಾರಾಣಿ(35) ಮುಂತಾದವರೇ ಕೊಲೆಗೀಡಾದವರು. ಕೊಲೆಗೀಡಾದ ಕುಟುಂಬದ ನೆರೆಮನೆಯವನೇ ಆದ ಅಪ್ಪಳರಾಜು ಎಂಬವನೇ ಕೊಲೆ ಮಾಡಿದ ದುಷ್ಕರ್ಮಿ.

2018 ರಲ್ಲಿಯೇ ಎರಡೂ ಕುಟುಂಬಗಳ ನಡುವೆ ವಿವಾದಗಳುಂಟಾಗಿದ್ದು, ಇದೀಗ ನರಮೇಧದಲ್ಲಿ ಪರ್ಯಾವಸಾನಗೊಂಡಿದೆ. ಜೊತೆಗೆ ಎರಡೂ ಕುಟುಂಬಗಳ ನಡುವೆ ಆಸ್ತಿ ತಕರಾರುಗಳೂ ಇತ್ತೆನ್ನಲಾಗಿದೆ.

ಇಂದು ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಘಟನೆಯು ನಡೆದಿದ್ದು, ಘಟನಾ ಸ್ಥಳಕ್ಕೆ ಪೋಲೀಸರು ಮುಟ್ಟುವ ವೇಳೆ ದುಷ್ಕರ್ಮಿ ಅಪ್ಪಳರಾಜು ರಕ್ತದಲ್ಲಿ ಮುಳುಗಿದ್ದಕೊಲೆಗೀಡಾದ ಕುಟುಂಬದ ವಿಜಯ್ ಎಂಬವನು ಅತ್ಯಾಚಾರದ ಮಾಡಿದ್ದಾನೆಂದು ಆರೋಪಿಸಲಾಗಿತ್ತು. ಘಟನೆ ನಡೆಯುವ ಸಮಯದಲ್ಲಿ ವಿಜಯ್ ಮನೆಯಲ್ಲಿರಲಿಲ್ಲ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು